ನವದೆಹಲಿ, ಸೆ.15 (DaijiworldNews/PY): ಭಾರತದ ಔಷಧ ನಿಯಂತ್ರಕ ಜನರಲ್, ಸ್ಪುಟ್ನಿಕ್ನ ಏಕ ಡೋಸ್ ಕೊರೊನಾ ಲಸಿಕೆಯಾ ಸ್ಪುಟ್ನಿಕ್ ಲೈಟ್, ಭಾರತೀಯ ಜನಸಂಖ್ಯೆಯ ಮೇಲೆ ಮೂರನೇ ಹಂತದ ಪ್ರಯೋಗ ನಡೆಸಲು ಅನುಮೋದನೆ ನೀಡಿದೆ.
ಸ್ಪುಟ್ನಿಕ್ ಲೈಟ್ಗಾಗಿ ಮೂರನೇ ಹಂತದ ಬ್ರಿಡ್ಜಿಂಗ್ ಪ್ರಯೋಗಗಳನ್ನು ಡಿಸಿಜಿಐನ ವಿಷಯ ತಜ್ಞರ ಸಮಿತಿ ಶಿಫಾರಸು ಮಾಡಿದೆ.
ಕೇಂದ್ರ ಔಷಧ ಪ್ರಮಾಣಿತ ನಿಯಂತ್ರಣ ಸಂಸ್ಥೆಯ ವಿಷಯ ತಜ್ಞರ ಸಮಿತಿ ಈ ಹಿಂದೆ ಜುಲೈನಲ್ಲಿ ಸ್ಪುಟ್ನಿಕ್ ಲೈಟ್ಗೆ ತುರ್ತು ಬಳಕೆಗೆ ಅಧಿಕಾರವನ್ನು ನೀಡಿಲು ನಿರಾಕರಿಸಿದ್ದು, ದೇಶದಲ್ಲಿ ರಷ್ಯಾದ ಲಸಿಕೆಯ ಮೂರನೇ ಹಂತದ ಪ್ರಯೋಗದ ಅವಶ್ಯಕತೆಯನ್ನು ತಳ್ಳಿ ಹಾಕಿದ್ದರು.
ಡಾ. ರೆಡ್ಡಿ ಅವರ ಪ್ರಯೋಗಾಲಯಗಳು ಭಾರತದಲ್ಲಿ ಸ್ಪುಟ್ನಿಕ್ ವಿ ಲಸಿಕೆಯ ಮೂರನೇ ಹಂತದ ಪ್ರಯೋಗಗಳು ನಡೆಸಲು ಕಳೆದ ವರ್ಷ ರಷ್ಯಾದ ನೇರ ಹೂಡಿಕೆನೊಂದಿಗೆ ಪಾಲುದಾರಿಕೆ ಹೊಂದಿದ್ದವು. ಭಾರತದಲ್ಲಿ ಏಕ ಶಾಟ್ ಲಸಿಕೆಯ ಮಾರುಕಟ್ಟೆ ದೃಢೀಕರಣಕ್ಕಾಗಿ ಸ್ಪುಟ್ನಿಕ್ ಲೈಟ್ನ ಮೂರನೇ ಹಂತದ ವೈದ್ಯಕೀಯ ಪ್ರಯೋಗದಿಂದ ಸುರಕ್ಷತೆ, ಇಮ್ಯುನೊಜೆನಿಸಿಟಿ ಹಾಗೂ ಪರಿಣಾಮಕಾರಿತ್ವದ ದತ್ತಾಂಶವನ್ನು ಸಲ್ಲಿಸುವಂತೆ ಎಸ್ ಇಸಿ ಡಾ.ರೆಡ್ಡಿಸ್ ಅವರನ್ನು ಕೇಳಿದೆ.