ನವದೆಹಲಿ, ಸೆ.15 (DaijiworldNews/PY): "ವಿಶ್ವದಲ್ಲೇ ಭಾರತವು ಅತಿ ಹೆಚ್ಚು ಮಂದಿಗೆ ಕೊರೊನಾ ಲಸಿಕೆ ನೀಡಿದ ರಾಷ್ಟ್ರವಾಗಿದೆ" ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ಮಾಂಡವಿಯಾ ಸರ್ಕಾರ ನೀಡಿರುವ ಮಾಹಿತಿಯ ಪ್ರಕಾರ, ಗ್ರಾಮೀಣ ಪ್ರದೇಶಗಳ ಲಸಿಕಾ ಕೇಂದ್ರಗಳಲ್ಲಿ ಮಂಗಳವಾರದ ವೇಳೆಗೆ ಶೇ 62.54 ಹಾಗೂ ನಗರ ಪ್ರದೇಶಗಳ ಲಸಿಕಾ ಕೇಂದ್ರಗಳಲ್ಲಿ ಶೇ. 36.30ರಷ್ಟು ಲಸಿಕೆ ನೀಡಲಾಗಿದೆ.
ದೇಶಾದ್ಯಂತ ಈವರೆಗೆ ಒಟ್ಟು 75 ಕೋಟಿಗೂ ಅಧಿಕ ಮಂದಿಗೆ ಲಸಿಕೆ ನೀಡಲಾಗಿದೆ.
ಈವರೆಗೆ ಶೇ 52.5ರಷ್ಟು ಪುರುಷರಿಗೆ, ಶೇ 47.5ರಷ್ಟು ಮಹಿಳೆಯರಿಗೆ ಹಾಗೂ ಶೇ 0.02ರಷ್ಟು ತೃತೀಯ ಲಿಂಗಿಗಳಿಗೆ ಕೊರೊನಾ ಲಸಿಕೆ ನೀಡಲಾಗಿದೆ.
ದೇಶದಲ್ಲಿ ಇಲ್ಲಿಯವರೆಗೆ 18 ವರ್ಷ ಮೇಲ್ಪಟ್ಟ ಶೇ.60.7ರಷ್ಟು ಮಂದಿಗೆ ಕನಿಷ್ಠ ಕೊರೊನಾ ಲಸಿಕೆ ಪಡೆದಿದ್ದಾರೆ.
ಭಾರತದಲ್ಲಿ ಕನಿಷ್ಠ ಒಂದು ಡೋಸ್ ಹಾಗೂ ಎರಡೂ ಡೋಸ್ ಪಡೆದವರ ಸಂಖ್ಯೆ ವಿಶ್ವದಲ್ಲೇ ಹೆಚ್ಚು. ಸರಾಸರಿ ಲಸಿಕೆ ನೀಡಿಕೆಯಲ್ಲೂ ಕೂಡಾ ನಮ್ಮಲ್ಲೇ ಅಧಿಕ ಎಂದು ಸಚಿವಾಲಯ ತಿಳಿಸಿದೆ.
ಭಾರತದಲ್ಲಿ 18.01 ಕೋಟಿ ಜನರು ಕೊರೊನಾ ಲಸಿಕೆ ಪಡೆದಿದ್ದರೆ, ಅಮೇರಿಕಾದಲ್ಲಿ 17.8 ಕೋಟಿ ಜನರು ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ. ಶೇ.100ರಷ್ಟು ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡಲಾಗಿದೆ. ಶೇ.81.1ರಷ್ಟು ಮುಂಚೂಣಿ ಕಾರ್ಯಕರ್ತರಿಗೆ ಎರಡನೇ ಲಸಿಕೆ ನೀಡಲಾಗಿದೆ.