ಕೋಲ್ಕತ್ತ, ಸ. 14 (DaijiworldNews/HR): ಪಶ್ಚಿಮ ಬಂಗಾಳದ ಬಿಜೆಪಿ ಸಂಸದ ಅರ್ಜುನ್ ಸಿಂಗ್ ಅವರ ಮನೆಯ ಮೇಲೆ ಇಂದು ಬಾಂಬ್ ಎಸೆಯಲಾಗಿದ್ದು, ಬಾಂಬ್ ನಿಷ್ಕ್ರಿಯ ದಳ ಪರಿಶೀಲನೆ ನಡೆಸುತ್ತಿದ್ದು, ಪೊಲೀಸರು ಆ ಪ್ರದೇಶದಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.
ಅರ್ಜುನ್ ಸಿಂಗ್ ಅವರ ಮನೆಯ ಮೇಲೆ ಸೆಪ್ಟೆಂಬರ್ 8ರಂದು ನಡೆದಿದ್ದ ಇದೇ ರೀತಿಯ ಕಚ್ಚಾ ಬಾಂಬ್ ದಾಳಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯು ತನಿಖೆಗೆ ಆದೇಶಿಸಿದ ಒಂದು ದಿನದ ನಂತರ ಈ ಘಟನೆ ನಡೆದಿದೆ.
ಈ ಕುರಿತು ಟ್ವೀಟ್ ಮಾಡಿರುವ ಅರ್ಜುನ್ ಸಿಂಗ್, "ದಾಳಿಯ ಹಿಂದೆ ತೃಣಮೂಲ ಕಾಂಗ್ರೆಸ್ ರಕ್ಷಣೆಯಲ್ಲಿರುವ ಗೂಂಡಾಗಳ ಕೈವಾಡವಿದೆ" ಎಂದು ಆರೋಪಿಸಿದ್ದಾರೆ.
ಇನ್ನು"ಇದೊಂದು ಯೋಜಿತ ದಾಳಿಯಲ್ಲದೆ ಮತ್ತೇನೂ ಅಲ್ಲ. ಇದರ ಹಿಂದೆ ಟಿಎಂಸಿ ಇದೆ . ಅವರು ನನ್ನನ್ನು ಮತ್ತು ನನ್ನ ಜನರನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ" ಎಂದು ಹೇಳಿದ್ದಾರೆ.