ಮಲಪ್ಪುರಂ, ಸ. 14 (DaijiworldNews/HR): ಕೇರಳ ಪೊಲೀಸ್ನ ಭಯೋತ್ಪಾದನಾ ವಿರೋಧಿ ದಳದ ಸಿಬ್ಬಂದಿ ಮಂಗಳವಾರ ಸಿಪಿಐ ಕಾರ್ಯಕರ್ತ ಸಿ.ಪಿ.ಉಸ್ಮಾನ್ ಎಂಬಾತನನ್ನು ಬಂಧಿಸಿದ್ದಾರೆ.
ಸಾಂಧರ್ಭಿಕ ಚಿತ್ರ
ಸಿ.ಪಿ.ಉಸ್ಮಾನ್ ವಿರುದ್ಧ 2019ರಲ್ಲಿ ಪ್ರಕರಣ ದಾಖಲಾಗಿದ್ದು, ರಾಜ್ಯದಲ್ಲಿ ಭಯೋತ್ಪಾದನಾ ಚಟುವಟಿಕೆ ವಿಸ್ತರಿಸುವ ಸಂಘಟನೆಯೊಂದರ ಜೊತೆಗೆ ಸಕ್ರಿಯವಾಗಿ ಗುರುತಿಸಿಕೊಂಡಿದ್ದ ಆರೋಪವಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಅನೇಕ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಈತನ ವಿರುದ್ಧ ಮೊದಲಿಗೆ ಕೋಯಿಕ್ಕೊಡ್ನ ಪಂತೀರಂಕಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಯನ್ನು ಎನ್ಐಎ ಕೈಗೊಂಡಿತ್ತು ಎನ್ನಲಾಗಿದೆ.
ಈ ಪ್ರಕರಣ ಸಂಬಂಧ ಈಗಾಗಲೇ ಅಲಾನ್, ತ್ವಾವಹಾ ಮತ್ತು ವಿಜಿತ್ ವಿಜಯನ್ ಎಂಬವರನ್ನು ಈಗಾಗಲೇ ಬಂಧಿಸಲಾಗಿದೆ.