ನವದೆಹಲಿ, ಸೆ14 (DaijiworldNews/MS): ದೇಶದ ಜನರನ್ನು ತಮ್ಮ ಮಾತೃಭಾಷೆಯೊಂದಿಗೆ ಹಿಂದಿಯನ್ನು ಬಳಸುವ ವಾಗ್ದಾನ ತೆಗೆದುಕೊಳ್ಳಬೇಕೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಮನವಿ ಮಾಡಿದ್ದು ಭಾರತವು ಭಾಷೆಗಳೊಂದಿಗೆ ಸಹ ‘ಆತ್ಮನಿರ್ಭಾರ್’ ಆಗಬೇಕು ಎಂದು ಹೇಳಿದರು.
ಹಿಂದಿ ದಿನಾಚರಣೆಯ ಅಂಗವಾಗಿ ಮಾತನಾಡಿದ ಕೇಂದ್ರ ಗೃಹ ಸಚಿವರು ಈ ಹೇಳಿಕೆ ನೀಡಿದ್ದು,"ಆತ್ಮನಿರ್ಭರ್" ಆಗುವುದು ಕೇವಲ ದೇಶದೊಳಗೆ ಉತ್ಪಾದನೆಗೆ ಒತ್ತು ಕೊಡುವುದರಿಂದಲ್ಲ, ನಾವು ಭಾಷೆಗಳೊಂದಿಗೆ ಸಹ 'ಆತ್ಮನಿರ್ಭರ್' ಆಗಿರಬೇಕು. ಪ್ರಧಾನಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಿಂದಿ ಮಾತನಾಡಲು ಸಾಧ್ಯವಾದರೆ, ನಾವು ಮಾತ್ರ ಮುಜುಗರ ಪಡುತ್ತೇವೆ? ಹಿಂದಿಯಲ್ಲಿ ಮಾತನಾಡುವುದು ಕಳವಳಕಾರಿಯಾದ ದಿನಗಳು ಕಳೆದುಹೋಗಿವೆ, ’’ ಎಂದು ಅಮಿತ್ ಶಾ ಹೇಳಿದರು.
ಭಾರತದ ಪ್ರಗತಿಯೂ ಮಾತೃಭಾಷೆ ಮತ್ತು ಅಧಿಕೃತ ಭಾಷೆಯ ಸಮನ್ವಯದಲ್ಲಿ ಅಡಕವಾಗಿದೆ" ಎಂದು ಗೃಹ ಸಚಿವರು ಹೇಳಿದರು.
ಹಿಂದಿ ದಿನಾಚರಣೆಯ ಸಂದರ್ಭದಲ್ಲಿ, ದೇಶದ ಜನರು ಮೂಲಭೂತ ಕೆಲಸಗಳಲ್ಲಿ ತಮ್ಮ ಮಾತೃಭಾಷೆಯೊಂದಿಗೆ ಅಧಿಕೃತ ಭಾಷೆಗಳಲ್ಲಿ ಒಂದಾದ ಹಿಂದಿಯನ್ನು ಕ್ರಮೇಣವಾಗಿ ಬಳಸಲು ಪ್ರತಿಜ್ಞೆ ತೆಗೆದುಕೊಳ್ಳಬೇಕೆಂದು ಎಂದು ನಾನು ಎಲ್ಲರನ್ನು ಒತ್ತಾಯಿಸುತ್ತೇನೆ. ಮಾತೃಭಾಷೆ ಮತ್ತು ಅಧಿಕೃತ ಭಾಷೆಯ ಸಮನ್ವಯದಲ್ಲಿ ಭಾರತದ ಪ್ರಗತಿ ಅಡಕವಾಗಿದೆ ಎಂದು ಹೇಳಿದ್ದಾರೆ.
ಮಾತ್ರವಲ್ಲದೆ ನಿಮಗೆಲ್ಲರಿಗೂ ಹಿಂದಿ ದಿನಾಚರಣೆಯ ಶುಭಾಶಯಗಳು ಎಂದು ಶಾ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.