ಬೆಂಗಳೂರು, ಸೆ14 (DaijiworldNews/MS): ಕಾಂಗ್ರೆಸ್ ಮಾಡಿದ ಪಾಪದ ಸಾಲ ತೀರಿಸಬೇಕಾಗಿರುವುದರಿಂದ ಈಗ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಚಿಕ್ಕಮಗಳೂರು ಶಾಸಕ ಸಿ.ಟಿ. ರವಿ ಹೇಳಿದರು.
ವಿಧಾನಮಂಡಲದ 2ನೇ ದಿನದ ಕಲಾಪದ ದಿನ ಮಾತನಾಡಿದ ಸಿ.ಟಿ ರವಿ, ಈಗ ಹೋರಾಟ ಮಾಡುತ್ತಿದ್ದವರು ಅಂದು ಸಾಲ ಪಡೆಯುವುದಕ್ಕೆ ವಿದೇಶಗಳಿಗೆ ಹೋಗುತ್ತಿದ್ದರು ಹೀಗಾಗಿ ಚಿನ್ನವನ್ನು ಒತ್ತೆಯಾಗಿ ಇಟ್ಟವರು ಯಾರು ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಮಾಡಿದ ಪಾಪದ ಸಾಲ ತೀರಿಸಬೇಕಾಗಿದೆ ಹೀಗಾಗಿ ಬೆಲೆ ಏರಿಕೆಯಾಗಿದೆ . ಕಾಂಗ್ರೆಸ್ನವರು ದಿನಾ ಎತ್ತಿನ ಗಾಡಿಯಲ್ಲಿ ಬರ್ತಾರೋ, ಒಂದು ದಿನ ಶೋ ಕೊಡಲು ಮಾತ್ರ ಬರುತ್ತಾರೆಯೇ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು. ಬೆಲೆ ಏರಿಕೆ ನಮ್ಮ ದೇಶದಲ್ಲಿ ಮಾತ್ರ ಆಗುತ್ತಿಲ್ಲ. ಜಾಗತಿಕ ಮಟ್ಟದಲೂ ಬೆಲೆ ಏರಿಕೆಯಾಗುತ್ತಿದೆ. ಆದ್ರೆ ಬೆಲೆ ಏರಿಕೆ ತಾತ್ಕಾಲಿಕವಾಗಿದೆ ಎಂದು ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡರು.
ಭಾರತದಲ್ಲಿ ದಾಖಲೆ ಪ್ರಮಾಣದಲ್ಲಿ ವಿದೇಶಿ ವಿನಿಮಯ ಇದೆ. ಹೀಗಾಗಿ ದೇಶದ ಭವಿಷ್ಯದ ಬಗ್ಗೆ ಆತಂಕಪಡಬೇಕಾದ ಅಗತ್ಯವಿಲ್ಲ. ಕಾಂಗ್ರೆಸ್ನವರಿಗೆ ಮಾತ್ರ ತಮ್ಮ ಮುಂದಿನ ಭವಿಷ್ಯದ ಬಗ್ಗೆ ಆತಂಕವಿದೆ ಎಂದು ಕುಹಕವಾಡಿದರು.