ಬೆಂಗಳೂರು, ಸೆ14 (DaijiworldNews/MS): ಬಿಜೆಪಿ ಎಂದರೆ ಯೋಜನೆ ಮತ್ತು ಯೋಚನೆ ಇಲ್ಲದ ಗಾಂಪರ ಗುಂಪು ಎಂಬುದು ಸ್ಪಷ್ಟ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ಉದ್ಯೋಗ ಸೃಷ್ಟಿಗಿಂತಲೂ, ಬೇಡಿಕೆ ಆಧಾರಿತ ಕೌಶಲ ತರಬೇತಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ' ಎಂಬ ಕೌಶಲಾಭಿವೃದ್ಧಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿಕೆಯ ಕುರಿತು ವುಂಗ್ಯ ವಾಡಿರುವ ಕಾಂಗ್ರೆಸ್ ಬಿಜೆಪಿಯನ್ನು ಗಾಂಪರ ಗುಂಪು ಎಂದು ಕರೆದಿದೆ.
ಈ ಬಗ್ಗೆ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್ ಘಟಕವೂ " ಉದ್ಯೋಗ ಸೃಷ್ಟಿಗೆ ಕ್ರಮ ವಹಿಸದೆ ಕೇವಲ ಕೌಶಲ್ಯ ತರಬೇತಿ ನೀಡಿ ಕೌಶಲ್ಯಯುತ ನಿರುದ್ಯೋಗಿಗಳನ್ನು ಸೃಷ್ಟಿಸುವಿರಾ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರೇ? ಉದ್ಯೋಗ ಸೃಷ್ಟಿಯಲ್ಲಿ ರಾಜ್ಯ ಹಿಂದುಳಿದಿದ್ದರೂ ಕ್ರಮವಹಿಸದೆ ಯುವ ಸಮುದಾಯದ ಬದುಕನ್ನು ಬಿಜೆಪಿಯೂ ಕತ್ತಲೆಗೆ ತಳ್ಳುತ್ತಿದೆ" ಎಂದು ಆರೋಪಿಸಿದೆ.
ಮತ್ತೊಂದು ಟ್ವೀಟ್ ನಲ್ಲಿ ವಿಧಾನ ಸೌಧದಲ್ಲಿ ಮದ್ಯದ ಬಾಟಲಿ ದೊರಕಿರುವ ವಿಚಾರವಾಗಿ " ರಾಜ್ಯದ ದಿಕ್ಕೆಟ್ಟ ಆರ್ಥಿಕ ಪರಿಸ್ಥಿತಿ ಸರಿದೂಗಿಸಲು ಬಿಜೆಪಿ ಸರ್ಕಾರದ ಅಭಕಾರಿ ಇಲಾಖೆ ವಿಧಾನಸೌಧದಲ್ಲಿಯೇ ಮದ್ಯದಂಗಡಿ ತೆರೆದಿರುವಂತಿದೆ! ಪ್ರಜಾಪ್ರಭುತ್ವದ ದೇಗುಲ ಎಂದು ಕರೆಸಿಕೊಳ್ಳುವ ವಿಧಾನಸೌಧದ ಆವರಣದೊಳಗೆ ಭದ್ರತೆ ಮೀರಿ ಮದ್ಯದ ಪಾರ್ಟಿ ನಡೆಯುತ್ತದೆಂದರೆ ರಾಜ್ಯದ ಕಾನೂನು ಸುವ್ಯವಸ್ಥೆಯ ದುಃಸ್ಥಿತಿಯನ್ನ ಊಹಿಸಬಹುದು" ಎಂದು ಹೇಳಿದೆ.