ಮಂಡ್ಯ, ಸ. 13 (DaijiworldNews/HR): ವೈಯಕ್ತಿಕ ವಿಚಾರದ ಬದಲು ಅಭಿವೃದ್ಧಿ ಕೆಲಸಗಳ ಬಗ್ಗೆ ಸದನದಲ್ಲಿ ಜೆಡಿಎಸ್ ಶಾಸಕರು ಮಾತನಾಡಲಿ ಎಂದು ಜೆಡಿಎಸ್ ಶಾಸಕರಿಗೆ ಟಾಂಗ್ ನೀಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಜೆಡಿಎಸ್ ಶಾಸಕರು ಅಧಿವೇಶನದಲ್ಲಿ ಏನು ಬೇಕಾದರೂ ಮಾತನಾಡಲಿ. ಮಂಡ್ಯದ ಅಭಿವೃದ್ಧಿ ಕೆಲಸಗಳ ಬಗ್ಗೆ ಚರ್ಚೆ ಮಾಡಿದರೆ ಅದನ್ನು ಸ್ವಾಗತಿಸುತ್ತೇನೆ. ಮಂಡ್ಯದಲ್ಲಿ ದೊಡ್ಡ ದೊಡ್ಡ ಸಮಸ್ಯೆಗಳಿವೆ. ಅದನ್ನು ಬಿಟ್ಟು ವೈಯಕ್ತಿವಾಗಿ ನನ್ನ ವಿಚಾರಗಳನ್ನು ಚರ್ಚೆ ಮಾಡುವುದು ಅವರಿಗೆ ಬಿಟ್ಟಿದ್ದು" ಎಂದರು.
ಇನ್ನು "ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಮೊದಲು ಚರ್ಚಿಸಲಿ. ಅದನ್ನು ಬಿಟ್ಟು ಲೇಟರ್ ಹೆಡ್ನಲ್ಲಿ ಸುಮಲತಾ, ಅಂಬರೀಶ್, ಅಮರನಾಥ್ ಅಂತಾ ಇದೆ. ಲೆಟರ್ ಕೆಳಗಡೆ ಯಾರ ಸಹಿ ಇದೆ. ಈ ಸಲ ಬೇರೆ ತರ ಸಹಿ ಮಾಡಿದ್ದಾರೆ. ಬೇರೆ ಯಾರೋ ಇವಾಗ ಸಹಿ ಮಾಡಿದ್ದಾರೆ. ಈ ರೀತಿಯ ವಿಚಾರಗಳನ್ನು ಚರ್ಚೆ ಮಾಡುವುದಲ್ಲ" ಎಂದು ಹೇಳಿದ್ದಾರೆ.