ಬಾಗಲಕೋಟೆ, ಸೆ.13 (DaijiworldNews/PY): ತಾಯಿಯೊಬ್ಬಳು ಒಂದು ವರ್ಷದ ಪುಟ್ಟ ಕಂದಮ್ಮನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ರಾಘಾಪುರದಲ್ಲಿ ನಡೆದಿದೆ.
ಮೃತರನ್ನು ಫಕೀರವ್ವ (26) ಹಾಗೂ ಶಿವಾನಿ (1) ಎಂದು ಗುರುತಿಸಲಾಗಿದೆ.
ಫಕೀರವ್ವ ಹೆರಿಗೆಗಾಗಿ ತನ್ನ ಅಜ್ಜಿಯ ಊರಾದ ರಾಘಾಪುರಕ್ಕೆ ಬಂದಿದ್ದಳು. ಗಂಡನ ಮನೆಯವರು ಫಕೀರವ್ವನನ್ನು ಕರೆದುಕೊಂಡು ಹೋಗಲು ರಾಘಾಪುರಕ್ಕೆ ಬಂದಿದ್ದಾರೆ. ಆದರೆ, ಫಕೀರವ್ವ ತನ್ನ ಒಂದು ವರ್ಷದ ಮಗುವನ್ನು ಎತ್ತಿಕೊಂಡು ಅಜ್ಜಿಯ ಜಮೀನಿನಲ್ಲಿರುವ ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಮಗುವಿನ ಮೃತದೇಹವನ್ನು ಬಾವಿಯಿಂದ ಹೊರತೆಗೆದಿದ್ದು, ಮಹಿಳೆಗಾಗಿ ಬಾವಿಯಲ್ಲಿ ಶೋಧ ಕಾರ್ಯ ಮುಂದುವರಿಸಿದ್ದಾರೆ.