ಬೆಂಗಳೂರು, ಸ. 13 (DaijiworldNews/HR): ಬೆಲೆ ಏರಿಕೆ ವಿರೋಧಿಸಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಪಾರ್ಲಿಮೆಂಟ್ಗೆ ಎತ್ತಿನಗಾಡಿ ಮೇಲೆ ಬಂದಿದ್ದರು. ಆದರೆ ಈಗ ನಾವು ಬಂದರೆ ಏಕೆ ತಪ್ಪು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಯುಪಿಎ ಸರ್ಕಾರ ಇದ್ದಾಗ ಕಾಂಗ್ರೆಸ್ ನವರು ಎತ್ತಿನಗಾಡಿ ಮೇಲೆ ವಿಧಾನಸೌಧಕ್ಕೆ ಬರಬೇಕಿತ್ತು ಎಂಬ ಸಿಎಂ ಬೊಮ್ಮಾಯಿ ಹೇಳಿಕೆಗೆ ತಿರುಗೇಟು ನೀಡಿದ ಅವರು, "ಯುಪಿಎ ಸರ್ಕಾರದ ಸಂದರ್ಭದಲ್ಲಿ ಕಚ್ಚಾತೈಲದ ಬೆಲೆ 110 ಡಾಲರ್ ಮೇಲಿತ್ತು. ಆದರೂ ಕಡಿಮೆ ದರದಲ್ಲಿ ಪೆಟ್ರೋಲ್ ನೀಡಲಾಗುತ್ತಿತ್ತು. ಈಗ ಕಚ್ಚಾ ತೈಲ ಬೆಲೆ 70 ಡಾಲರ್ ಇದೆ. ಆದರೆ ಪೆಟ್ರೋಲ್ 100 ರ ಗಡಿ ದಾಟಿದೆ. ಮನಮೋಹನ್ ಸಿಂಗ್ ಅವರ ಕಾಲದಲ್ಲಿ 3.45 ರೂ ಮಾತ್ರ ಪ್ರತಿ ಲೀಟರ್ ಮೇಲೆ ತೆರಿಗೆ ವಿಧಿಸಲಾಗುತ್ತಿತ್ತು. ಈಗ 33 ರೂಗಳಷ್ಟು ಪ್ರತಿ ಲೀಟರ್ ಮೇಲೆ ತೆರಿಗೆ ವಿಧಿಸಲಾಗುತ್ತಿದೆ. ಯಾವುದು ಸತ್ಯ ಯಾವುದು ಸುಳ್ಳು ಎಂದು ಬೊಮ್ಮಾಯಿ ಹೇಳಲಿ" ಎಂದರು.
ಇನ್ನು ಎಲ್ ಪಿಜಿ ಬೆಲೆ ಏರಿಕೆಯಾದಾಗ ಶೋಭಾ ಕರಂದ್ಲಾಜೆ ಅವರು ತಲೆ ಮೇಲೆ ಸಿಲೆಂಡರ್ ಹೊತ್ಕೊಂಡು ಪ್ರತಿಭಟನೆ ಮಾಡಿದ್ದು, . ಈಗ ಶೋಭಾ ಕರಂದ್ಲಾಜೆ ಅವರು ಏಲ್ಲಿ ಹೋಗಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ದೇವಸ್ಥಾನ ತೆವು ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, "ಪ್ರತಾಪ್ ಸಿಂಹ ಪ್ರಚಾರ ಪ್ರಿಯ. ದೇವಸ್ಥಾನ ಕೆಡವುತ್ತಿರುವುದು ಅವರದೇ ಸರ್ಕಾರ. ಅವರು ಪ್ರತಿಭಟಿಸುವುದಾದರೆ, ರಾಜೀನಾಮೆ ಕೊಟ್ಟು ಪ್ರತಿಭಟನೆ ನಡೆಸಲಿ" ಎಂದು ಹೇಳಿದ್ದಾರೆ.