ಬೆಂಗಳೂರು, ಸೆ 13 (DaijiworldNews/MS): ವಿಧಾನಸೌಧದ ಎರಡನೇ ಮಹಡಿಯ ರೂಮ್ ನಂಬರ್ 208ರ ಸನಿಹದಲ್ಲಿಯೇ ಮದ್ಯದ ಬಾಟಲಿಗಳು ಕಂಡು ಬಂದಿವೆ. ಹೀಗಾಗಿ ವಿಧಾನಸೌಧದಲ್ಲಿ ಎಣ್ಣೆ ಪಾರ್ಟಿ ನಡೆದಿದೆಯಾ ಎನ್ನುವ ಸಂಶಯ ವ್ಯಕ್ತವಾಗಿದೆ.
ಅಧಿವೇಶನದ ಸಮಯದಲ್ಲಿ ಎಂದಿಗಿಂತಲೂ ಹೆಚ್ಚು ಬಿಗಿ ಭದ್ರೆತೆ ಇರುತ್ತದೆ. ಇದರ ನಡುವೆಯೂ ಬಿಯರ್ ಬಾಟಲಿಗಳು ವಿಧಾನಸೌಧ ಪ್ರವೇಶಿಸಿದ್ದು ಹೇಗೆ ಎಂಬ ಕೂತೂಹಲ ಎಲ್ಲರಲ್ಲಿ ಮೂಡಿದೆ. ರಾತ್ರಿಯಾಗಿ ಬೆಳಗಾಗುವ ಹೊತ್ತಿಗೆ 208 ರೂಂ
ಪಕ್ಕದ ವಾಟರ್ ಟ್ಯಾಂಕ್ ಬಳಿ 2 ಬಿಯರ್ ಬಾಟಲ್ ಗಳು ಪತ್ತೆಯಾಗಿದೆ. ಸದ್ಯ ವಿಧಾನಸೌಧದಲ್ಲಿ ಬಿಯರ್ ಬಾಟಲ್ ಗಳನ್ನು ಇಟ್ಟಿರೋ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸದ್ಯ ವಿಧಾನಸೌಧದ ಸ್ವಚ್ಚತಾ ಸಿಬ್ಬಂದಿಗಳು ಸ್ಥಳದಿಂದ ಬಾಟೆಲ್ ಗಳನ್ನ ಕ್ಲಿಯರ್ ಮಾಡಿದ್ದಾರೆ.
ಇನ್ನು ಈ ಘಟನೆಯ ಬಗ್ಗೆ ಸ್ಪೀಕರ್ ತನಿಖೆಗೆ ಆದೇಶ ನೀಡುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.