ಬೆಂಗಳೂರು,ಸ. 13 (DaijiworldNews/HR): ಈಶ್ವರಪ್ಪಗು ನಂದು ಲವ್ ಅಂಡ್ ಹೇಟ್ ಸಂಬಂಧ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದು, ವಿಧಾನಮಂಡಲ ಅಧಿವೇಶನಲ್ಲಿ ಇಂದು ಸ್ವಾರಸ್ಯ ಸೃಷ್ಟಿಸಿತು.
ವಿಧಾನಸಭೆ ಕಲಾಪದಲ್ಲಿ ಸಿದ್ದರಾಮಯ್ಯ ಮಾತನಾಡಿದ್ದು ಸರಿಯಾಗಿ ಕೇಳಿಸುತ್ತಿರಲಿಲ್ಲ. ಆಗ ಸ್ಪೀಕರ್ ಕಾಗೇರಿ ಮೈಕ್ ಸರಿ ಮಾಡಿಕೊಳ್ಳುವಂತೆ ಸೂಚಿಸಿದರಲ್ಲದೇ, ನೀವು ಮಾತನಾಡುತ್ತಿರುವುದು ಈಶ್ವರಪ್ಪ ಅವರಿಗೆ ಕೇಳಿಸುತ್ತಿಲ್ಲ. ನಿಮಗೂ ಈಶ್ವರಪ್ಪಗೂ ಏನಾದರೂ ಸಿಟ್ಟಿದೆಯಾ ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ "ಈಶ್ವರಪ್ಪದು ನಂದು ಲವ್ ಅಂಡ್ ಹೇಟ್ ಸಂಬಂಧ" ಎಂದು ಹಾಸ್ಯಮಯವಾಗಿ ಪ್ರತಿಕ್ರಿಯಿಸಿದ್ದಾರೆ.