ತಿರುವನಂತಪುರಂ, ಸೆ.13 (DaijiworldNews/PY): ತಿರುವನಂತಪುರದಿಂದ ಶಾರ್ಜಾಗೆ 170 ಪ್ರಯಾಣಕರೊಂದಿಗೆ ಸಂಚಾರ ಆರಂಭಿಸಿದ ಏರ್ ಇಂಡಿಯಾ ಸೋಮವಾರ ಎಕ್ಸ್ಪ್ರೆಸ್ ವಿಮಾನ ತಾಂತ್ರಿಕ ದೋಷದ ಹಿನ್ನೆಲೆ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ವಾಪಾಸ್ಸಾಗಿದೆ.
"ಆರು ಮಂದಿ ಸಿಬ್ಬಂದಿಗಳಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ವಿಮಾನವನ್ನು ಸುರಕ್ಷಿತವಾಗಿ ತಿರುವನಂತಪುರ ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು. ಬಳಿಕ ಪ್ರಯಾಣಿಕರಿಗೆ ಬೇರೆ ವಿಮಾನ ವ್ಯವಸ್ಥೆ ಮಾಡಿ ಕಳುಹಿಸಲಾಯಿತು" ಎಂದು ಏರ್ ಇಂಡಿಯಾ ಎಕ್ಸ್ಪ್ರೆಸ್ ವಕ್ತಾರರು ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ್ದಾರೆ.
"ಈ ಘಟನೆ ಬೆಳಗ್ಗೆ 7 ಗಂಟೆಗೆ ನಡೆದಿದೆ. ವಿಮಾನ ಟೇಕ್ ಆಫ್ ಆದ ಅರ್ಧ ಗಂಟೆಯೊಳಗೆ ಪೈಲಟ್ಗಳು ತಾಂತ್ರಿಕ ದೋಷವನ್ನು ಗಮನಿಸಿದ್ದು, ಕೂಡಲೇ ತಿರುವನಂತಪುರ ವಿಮಾನ ನಿಲ್ದಾಣದಲ್ಲಿ ಇಳಿಸಲು ನಿರ್ಧರಿಸಿದರು" ಎಂದು ಏರ್ ಇಂಡಿಯಾ ಎಕ್ಸ್ಪ್ರೆಸ್ ವಕ್ತಾರರು ಹೇಳಿದ್ದಾರೆ.