ನವದೆಹಲಿ, ಸೆ.13 (DaijiworldNews/PY): "ಪ್ರಧಾನಿ ನರೇಂದ್ರ ಮೋದಿ ಸರ್ಕಾರದಿಂದ ನಮ್ಮ ಪಕ್ಷಕ್ಕೆ ಲವ್ ಲೆಟರ್ ಬಂದಿದೆ" ಎಂದು ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಚಡ್ಡ ಲೇವಡಿ ಮಾಡಿದ್ದಾರೆ.
ಜಾರಿ ನಿರ್ದೇಶನಾಲಯದಿಂದ ಎಎಪಿಗೆ ನೋಟಿಸ್ ನೀಡಲಾಗಿದೆ. ಇದನ್ನು ರಾಘವ್ ಚಡ್ಡ ವ್ಯಂಂಗ್ಯವಾಗಿ ಟ್ವಿಟರ್ನಲ್ಲಿ ಉಲ್ಲೇಖಿಸಿದ್ದು, "ಮೊದಲ ಬಾರಿಗೆ ಎಎಪಿಯು ಮೋದಿ ಸರ್ಕಾರದ ನೆಚ್ಚಿನ ಸಂಸ್ಥೆ ಜಾರಿ ನಿರ್ದೇಶನಾಲಯದಿಂದ ಪ್ರೇಮ ಪತ್ರವನ್ನು ಪಡೆದಿದೆ" ಎಂದು ಉಲ್ಲೇಖಿಸಿದ್ದಾರೆ.
"ನಾನು ಇಂದು ಮಾಧ್ಯಾಹ್ನ 1.30ಕ್ಕೆ ಪ್ರಮುಖ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತೇನೆ. ಅದರಲ್ಲಿ ಈ ನೋಟಿಸ್ ಬಗ್ಗೆ ಮಾತನಾಡುತ್ತೇನೆ" ಎಂದು ತಿಳಿಸಿದ್ದಾರೆ.
ಎಎಪಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಪಂಜಾಬ್ ಮತ್ತು ಉತ್ತರ ಪ್ರದೇಶದಲ್ಲಿ ಬಿಜೆಪಿ ವಿರುದ್ಧ ಸ್ಪರ್ಧಿಸಲಿದೆ.