ಬೆಂಗಳೂರು, ಸ. 13 (DaijiworldNews/HR): ಕಾಂಗ್ರೆಸ್ ಅಂದ್ರೆ ಗಿಮಿಕ್, ಗಿಮಿಕ್ ಅಂದ್ರೆ ಕಾಂಗ್ರೆಸ್ ಇದು ಎಲ್ಲರಿಗೂ ಗೊತ್ತಿರುವ ವಿಚಾರ ಎಂದು ಸಚಿವ ಶ್ರೀರಾಮುಲು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.
ವಿಧಾನಮಂಡಲ ಅಧಿವೇಶನ ಇಂದಿನಿಂದ ಆರಂಭವಾಗಿದ್ದು, ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ನಾಯಕರು ಎತ್ತಿನ ಗಾಡಿಯಲ್ಲಿ ಅಧಿವೇಶನಕ್ಕೆ ಆಗಮಿಸುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಈ ಕುರಿತು ವಿಧಾನಸೌಧದ ಆವರಣದಲ್ಲಿ ಪ್ರತಿಕ್ರಿಯಿಸಿದ ಶ್ರೀರಾಮುಲು, "ಕಾಂಗ್ರೆಸ್ ಅಂದ್ರೆ ಗಿಮಿಕ್, ಗಿಮಿಕ್ ಅಂದ್ರೆ ಕಾಂಗ್ರೆಸ್. ಅಲ್ಲದೇ, ಕಾಂಗ್ರೆಸ್ ಗೆ ಈ ವೇಳೆ ತಾವು ಒಂದು ಸವಾಲು ಹಾಕುತ್ತೇನೆ. ನಿಮಗೆ ದೇಶದ ಬಗ್ಗೆ ಕಾಳಜಿಯಿದ್ದರೆ, ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಕಡಿಮೆ ಮಾಡಲಿ"ಎಂದು ಸವಾಲು ಹಾಕಿದ್ದಾರೆ.