ಗದಗ, ಸೆ 13 (DaijiworldNews/MS) : ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಸೇನಾನಿ ವೆಂಕುಸಾ ಭಾಂಡಗೆ(105) ಹೃದಯಾಘಾತದಿಂದ ನಿಧನರಾಗಿದ್ದಾರೆ.
ಗದಗದಲ್ಲಿರುವ ತಮ್ಮ ಗಜೇಂದ್ರಗಡದ ನಿವಾಸದಲ್ಲಿ ಮೃತಪಟ್ಟಿದ್ದಾರೆ. ಕಳೆದ ವರ್ಷ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕೊರೊನಾದಿಂದ ಗುಣಮುಖರಾಗಿದ್ದ ವೆಂಕುಸಾ ಗಜೇಂದ್ರಗಡದ ಪಟ್ಟಣದ ನಿವಾಸಕ್ಕೆ ಹಿಂದಿರುಗಿದ್ದರು. ಆದರೆ ಭಾನುವಾರ ರಾತ್ರಿ 12:30ರ ಸುಮಾರಿಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.