ಯಾದಗಿರಿ, ಸೆ.13 (DaijiworldNews/PY): ಮಹಿಳೆಯನ್ನು ನಗ್ನಗೊಳಿಸಿ ಕಬ್ಬಿನ ಜಲ್ಲೆಯಿಂದ ಥಳಿಸಿ, ಅಂಗಾಗಳನ್ನು ಮುಟ್ಟಿ ವಿಕೃತ ಕೃತ್ಯ ನಡೆಸಿದ ಘಟನೆ ಯಾದಗಿರಿಯಲ್ಲಿ ನಡೆದಿದೆ.
ನಾಲ್ಕೈದು ಜನರ ಗುಂಪಿನಿಂದ ಈ ಕೃತ್ಯ ನಡೆದಿರುವ ಶಂಕೆ ಇದೆ. ಹಲ್ಲೆ ನಡೆಸಿದವರು ಯಾರು? ಹಲ್ಲೆಗೊಳಗಾದ ಮಹಿಳೆಯ ಯಾರು ಎಂದು ತಿಳಿದುಬಂದಿಲ್ಲ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ಕೂಡಾ ದಾಖಲಾಗಿಲ್ಲ.
ಯಾದಗಿರಿ-ಶಹಾಪುರ ಹೆದ್ದಾರಿ ಸಮೀಪದ ಜಮೀನೊಂದರಲ್ಲಿ ರಾತ್ರಿ ವೇಳೆ ಮಹಿಳೆಯನ್ನು ನಗ್ನಗೊಳಿಸಿ, ಆಕೆಯ ಮೇಲೆ ಕಬ್ಬಿನ ಹಲ್ಲೆಯಿಂದ ಹಲ್ಲೆ ಮಾಡಲಾಗಿದ್ದು, ಹಲ್ಲೆಕೋರರೇ ದೃಶ್ಯಗಳನ್ನು ಚಿತ್ರೀಕರಿಸಿಕೊಂಡಿದ್ದಾರೆ.
ಹನಿಟ್ರ್ಯಾಪ್ ಪ್ರಕರಣದಲ್ಲಿ ಮಹಿಳೆ ಭಾಗಿಯಾಗಿದ್ದ ಆರೋಪವಿದ್ದು, ಆಕೆಗೆ ಮೊಬೈಲ್ ತೋರಿಸುತ್ತಾ, ಇದರಲ್ಲಿರುವುದು ನೀನೆ ಅಲ್ಲವೇ ಎಂದು ಕೇಳಿ ಹಲ್ಲೆ ನಡೆಸಲಾಗಿದೆ.
ಪೈಶಾಚಿಕ ಕೃತ್ಯದ ವಿಡಿಯೋ ವೈರಲ್ ಆಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.