ಮುಂಬೈ, ಸೆ 13 (DaijiworldNews/MS): ಮೊಬೈಲ್ ಗೇಮ್ಗಾಗಿ ಸಹೋದರನೊಂದಿಗೆ ಜಗಳವಾಡಿ 16 ವರ್ಷದ ಹುಡುಗಿ ಇಲಿ ಪಾಷಾಣ ಸೇವಿಸಿ ಸಾವನ್ನಪ್ಪಿದ್ದ ಅಘಾತಕಾರಿ ಘಟನೆ ಮುಂಬೈನಲ್ಲಿ ವರದಿಯಾಗಿದೆ.
ಮುಂಬೈನ ಸಮ್ತಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಜನುಪಡ ಪ್ರದೇಶದಲ್ಲಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ತಕ್ಷಣ ಬಾಲಕಿಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮರುದಿನ ಬೆಳಿಗ್ಗೆ ಆಕೆ ಮೃತಪಟ್ಟಿದ್ದಾಳೆ. ಪೊಲೀಸರ ಪ್ರಕಾರ, ಶನಿವಾರ ಬೆಳಗ್ಗೆ 10 ಗಂಟೆಗೆ ಬಾಲಕಿ ಸಾವನ್ನಪ್ಪಿದ್ದಾಳೆ. ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.
ಸಮ್ತಾ ನಗರ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಸಂತೋಷ್ ಖರ್ಡೆ ಅವರು, "ಈ ಘಟನೆ ಶುಕ್ರವಾರ ರಾತ್ರಿ 11:30 ರ ಸುಮಾರಿಗೆ ನಡೆದಿದೆ. 16 ವರ್ಷದ ಸಂತ್ರಸ್ತೆ ಮತ್ತು ಆಕೆಯ ಕಿರಿಯ ಸಹೋದರನ ನಡುವೆ ಮೊಬೈಲ್ನಲ್ಲಿ ಆಟವಾಡಲು ಸಣ್ಣ ಜಗಳವಾಗಿದೆ. , ಹುಡುಗಿ ಹತ್ತಿರದ ಮೆಡಿಕಲ್ ಸ್ಟೋರ್ ನಿಂದ ಇಲಿ ವಿಷವನ್ನು ಖರೀದಿಸಿ ತನ್ನ ಕಿರಿಯ ಸಹೋದರನ ಮುಂದೆ ಸೇವಿಸಿದಳು. ಕಿರಿಯ ಸಹೋದರ ಈ ಬಗ್ಗೆ ಕುಟುಂಬಕ್ಕೆ ತಿಳಿಸಿದನು. ಕುಟುಂಬವು ತಕ್ಷಣ ಹುಡುಗಿಯನ್ನು ಆಸ್ಪತ್ರೆಗೆ ಕರೆದೊಯ್ದಿತು. ಮಾಹಿತಿಯ ಮೇರೆಗೆ ಪೊಲೀಸರು ಆಸ್ಪತ್ರೆಗೆ ತಲುಪಿದರು. ಚಿಕಿತ್ಸೆಯ ಸಮಯದಲ್ಲಿ ಹುಡುಗಿ ಮೃತಪಟ್ಟಿದ್ದು ತನಿಖೆ ನಡೆಯುತ್ತಿದೆ: ಎಂದು ತಿಳಿಸಿದ್ದಾರೆ.