ಧಾರವಾಡ, ಸೆ.13 (DaijiworldNews/PY): ಮಹಿಳೆಯ ಕೈಹಿಡಿದು ನಡುರಸ್ತೆಯಲ್ಲೇ ಎಳೆದಾಡಿದ ಜೆಡಿಎಸ್ ಮುಖಂಡ ಶ್ರೀಕಾಂತ ಜಮನಾಳ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಭಾನುವಾರ ಧಾರವಾಡದ ಹೊರವಲಯದ ಸತ್ತೂರ ಬಳಿ ಈ ಘಟನೆ ನಡೆದಿತ್ತು. ಶ್ರೀಕಾಂತ ಜಮನಾಳ ಸತ್ತೂರಿನ ಮಹಿಳೆಯ ಮನೆಗೆ ತೆರಳಿದ್ದರು. ಈ ವೇಳೆ ಶ್ರೀಕಾಂತ ಮಹಿಳೆಯ ಕೈಹಿಡಿದು ಎಳೆದಿದ್ದಾರೆ. ಮಹಿಳೆಯ ಕೈಹಿಡಿದು ಎಳೆದಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲು ವೈರಲ್ ಆಗಿತ್ತು.
ಘಟನೆಯ ಬಗ್ಗೆ ಮಹಿಳೆ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ದೂರು ದಾಖಲಾಗುತ್ತಿದ್ದಂತೆ ವಿಡಿಯೋ ವೈರಲ್ ಆಗಿದ್ದ ಕಾರಣ ಶ್ರೀಕಾಂತ್ ಅಲ್ಲಿಂದ ಪರಾರಿಯಾಗಿದ್ದ
ಇದೀಗ ಪೊಲೀಸರು ಶ್ರೀಕಾಂತ್ ಜಮನಾಳ ಅವರನ್ನು ಬಂಧಿಸಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.