ನವದೆಹಲಿ, ಸೆ.13 (DaijiworldNews/PY): ಸೆಪ್ಟೆಂಬರ್ 16ರಂದು ಶಾಂಘೈ ಸಹಕಾರ ಸಂಘಟನೆ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಲಿದ್ದು, ಇತರ ಏಳು ನೆರೆಯ ರಾಷ್ಟ್ರಗಳ ಮುಖ್ಯಸ್ಥರು ಕೂಡಾ ಉನ್ನತಮಟ್ಟದ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಭಾರತ, ಚೀನಾ ಸೇರಿದಂತೆ ಪಾಕಿಸ್ತಾನ, ತಜಕಿಸ್ತಾನ, ಉಜ್ಜೇಕಿಸ್ತಾನ, ಕಜಕಿಸ್ತಾನ, ಕಿರ್ಗಿಸ್ತಾನ್ ಎನ್ನುವ ಎಂಟು ಸದಸ್ಯ ರಾಷ್ಟ್ರಗಳನ್ನು ಎಸ್ಸಿಒ ಶೃಂಗಸಭೆ ಒಳಗೊಂಡಿದೆ. ರಾಜಧಾನಿ ದುಶಾನ್ಬೆ ಹೈಬ್ರಿಡ್ ಮೋಡ್ನಲ್ಲಿ ಸೆ.16ರಿಂದ 17ರವರೆಗೆ ನಡೆಯಲಿದೆ.
ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಸಹ ವಾಸ್ತವಿಕವಾಗಿ ಹಾಜರಿರುತ್ತಾರೆ ಎಂದು ನಿರೀಕ್ಷಿಸಲಾಗಿದೆ. ಸಭೆಯಲ್ಲಿ ಪಾಕಿಸ್ತಾನ ಅಧ್ಯಕ್ಷ, ರಷ್ಯಾ ಅಧ್ಯಕ್ಷ ಹಾಗೂ ಇತರ ಮಧ್ಯ ಏಷ್ಯಾ ರಾಷ್ಟ್ರಗಳು ಕೂಡಾ ಖುದ್ದಾಗಿ ಭಾಗವಹಿಸಲಿವೆ.
ದುಶ್ಬಾನೆಯಲ್ಲಿ ಕಳೆದ ಎರಡು ತಿಂಗಳು ಎಸ್ಸಿಒ ವಿದೇಶಿ, ರಕ್ಷಣಾ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರರ ಹಲವಾರು ಸಭೆಗಳು ನಡೆದಿವೆ.