ಗಾಂಧಿನಗರ, ಸೆ.12 (DaijiworldNews/PY): ಗುಜರಾತ್ನ ನೂತನ ಮುಖ್ಯಮಂತ್ರಿಯಾಗಿ ಅಹಮದಾಬಾದ್ನ ಘಟಲೋದಿಯ ಕ್ಷೇತ್ರದ ಶಾಸಕರಾದ ಭೂಪೇಂದ್ರಭಾಯಿ ಪಟೇಲ್ ಅವರನ್ನು ಆಯ್ಕೆ ಮಾಡಲಾಗಿದೆ.
ಭಾನುವಾರ ಗಾಂಧಿನಗರದ ಬಿಜೆಪಿ ಕಾರ್ಯಾಲಯ ಕಮಲಂನಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಶಾಸಕಾಂಗ ಸಭೆಯಲ್ಲಿ ಸರ್ವ ಶಾಸಕರ ಒಮ್ಮತದಿಂದ ಭೂಪೇಂದ್ರ ಪಟೇಲ್ ಅವರನ್ನು ಆಯ್ಕೆ ಮಾಡಿದ್ದಾರೆ ಎಂದು ಕೇಂದ್ರ ಸಚಿವ ನರೇಂದ್ರ ತೋಮರ್ ತಿಳಿಸಿದ್ದಾರೆ.
ಶನಿವಾರ ನಿಕಟಪೂರ್ವ ಸಿಎಂ ವಿಜಯ್ ರೂಪಾಣಿ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಈ ಸ್ಥಾನ ತೆರವಾಗಿತ್ತು.
2017 ರ ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಪಕ್ಷದ ಶಶಿಕಾಂತ್ ಪಟೇಲ್ ವಿರುದ್ದ 1,17,000 ಮತಗಳ ಅಂತರದಲ್ಲಿ ಗೆದ್ದಿದ್ದರು.
ಡಿಸೆಂಬರ್ 2022ಕ್ಕೆ ರಾಜ್ಯದ ಮುಂದಿನ ವಿಧಾನಸಭಾ ಚುನಾವಣೆಯು ನಡೆಯಲಿದ್ದು, ನೂತನ ಸಿಎಂ ಪಟೇಲ್ ಅವರಿಗೆ 15 ತಿಂಗಳು ಅಧಿಕಾರ ನಡೆಸುವ ಅವಕಾಶವಿದೆ.