ಶ್ರೀನಗರ, ಸ.12 (DaijiworldNews/HR): ಉಗ್ರರು ನಡೆಸಿದ ದಾಳಿಯಲ್ಲಿ ಓರ್ವ ಪೊಲೀಸ್ ಅಧಿಕಾರಿ ಗಾಯಗೊಂಡ ಘಟನೆ ಶ್ರೀ ನಗರದ ಖನ್ಯಾರ್ ಪ್ರದೇಶದಲ್ಲಿ ಭಾನುವಾರ ನಡೆದಿದೆ.
ಸಾಂಧರ್ಭಿಕ ಚಿತ್ರ
ಈ ಕುರಿತು ಮಾಹಿತಿ ನೀಡಿರುವ ಅಧಿಕಾರಿ, "ಭಾನುವಾರ ಮಧ್ಯಾಹ್ನ ಖನ್ಯಾರ್ನಲ್ಲಿ ಭಯೋತ್ಪಾದಕರು ಪೋಲಿಸ್ ನಾಕಾ ಪಾರ್ಟಿಯ ಮೇಲೆ ಗುಂಡು ಹಾರಿಸಿದದ್ದು, ದಾಳಿಯಲ್ಲಿ ಖನ್ಯಾರ್ನ ಪಿಎಸ್ಐ ಅರ್ಷಿದ್ ಅಹ್ಮದ್ ಅವರು ಗಾಯಗೊಂಡಿದ್ದಾರೆ" ಎಂದು ಹೇಳಿದ್ದಾರೆ.
ಇನ್ನು ಗಾಯಗೊಂಡ ಅಧಿಕಾರಿಯನ್ನು ಚಿಕಿತ್ಸೆಗಾಗಿ ಎಸ್ಎಮ್ಎಚ್ಎಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.
ದಾಳಿಕೋರರನ್ನು ಹಿಡಿಯಲು ಶೋಧ ಕಾರ್ಯಾಚರಣೆ ಆರಂಭಿಸಿಲಾಗಿದೆ.