ನವದೆಹಲಿ, ಸೆ.12 (DaijiworldNews/PY): "ಬಿಜೆಪಿ ಸರ್ಕಾರ ತೆಗೆದುಕೊಳ್ಳುತ್ತಿರುವ ಅಭಿವೃದ್ದಿಯಲ್ಲಿ ಭಾನುವಾರ ಹಾಗೂ ಸೋಮವಾರದ ನಡುವಿನ ವ್ಯತ್ಯಾಸಗಳು ಅಂತ್ಯವಾಗಿದ್ದು, ಕೆಲಸವೇ ಇಲ್ಲದಿದ್ದರೆ ಭಾನುವಾರ ಆದರೇನು, ಸೋಮವಾರ ಆದರೇನು?" ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಬಿಜೆಪಿ ಸರ್ಕಾರದ ಅಭಿವೃದ್ಧಿ ಹೇಗಿದೆ ಎಂದರೆ, ವಾರದ ರಜೆ ಹಾಗೂ ಕೆಲಸದ ದಿನಗಳ ನಡುವಿನ ವ್ಯತ್ಯಾಸವೇ ಅಂತ್ಯವಾಗಿದೆ. ಕೆಲಸವಿಲ್ಲದಿದ್ದರೆ ಭಾನುವಾರ ಹಾಗೂ ಸೋಮವಾರ ಒಂದೇ ರೀತಿ ಇರುತ್ತದೆ" ಎಂದಿದ್ದಾರೆ.
ಅಮೇರಿಕಾದ ವಾಹನ ತಯಾರಿಕಾ ಕಂಪೆನಿ ಫೋರ್ಡ್ ಭಾರತದಲ್ಲಿ ವಾಹನ ತಯಾರಿಕೆಯನ್ನು ನಿಲ್ಲಿಸಲು ತೀರ್ಮಾನಿಸಿದೆ. ಈ ಹಿನ್ನೆಲೆ ಸಣ್ಣ ಸಂಸ್ಥೆಗಳು ಮುಚ್ಚಬಹುದು ಎಂದು ಸಿಬ್ಬಂದಿಯೋರ್ವರ ಹೇಳಿಕೆಯನ್ನು ಉಲ್ಲೇಖಿಸಿರುವ ಮಾಧ್ಯಮದ ವರದಿಯೊಂದನ್ನು ಟ್ವೀಟ್ನಲ್ಲಿ ಪೋಸ್ಟ್ ಮಾಡಿದ್ದಾರೆ.