ಬೆಳಗಾವಿ, ಸೆ.12 (DaijiworldNews/PY): "ಮಾಜಿ ಸಚಿವ ಶ್ರೀಮಂತ ಪಾಟೀಲ್ ಅವರಿಗೆ ಯಾರು ಹಣದ ಆಮಿಷವೊಡ್ಡಿದ್ದು ಎನ್ನುವ ಬಗ್ಗೆ ತನಿಖೆಯಾಗಬೇಕು" ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಈ ವಿಚಾರವಾಗಿ ನಾನು ಶ್ರೀಮಂತ ಪಾಟೀಲ್ ಅವರು ಭೇಟಿ ಮಾಡಿಲ್ಲ. ಅವರಿಗೆ ಯಾರು ಹಣದ ಆಮಿಷವೊಡ್ಡಿದ್ದರು ಎನ್ನುವುದು ತನಿಖೆಯಾಗಬೇಕು" ಎಂದಿದ್ದಾರೆ.
"ಅಧಿಕಾರ ಎಂದಿಗೂ ಶಾಶ್ವತ ಅಲ್ಲ. ಆದರೆ, ಅವಕಾಶ ಕೊಟ್ಟಾಗ ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಶ್ರೀಮಂತ ಪಾಟೀಲ್ ಅವರು ಮಾತನಾಡುವ ಭರದಲ್ಲಿ ಆ ರೀತಿಯಾಗಿ ಹೇಳಿರಬಹುದು. ಈ ವಿಚಾರವಾಗಿ ನಾನು ಅವರನ್ನು ಖುದ್ದಾಗಿ ಭೇಟಿ ನೀಡಿ ಮಾತನಾಡುತ್ತೇನೆ" ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ನಿಂದ ಬಿಜೆಪಿಗೆ ಬರಲು ನನಗೆ ಹಣದ ಆಮಿಷವೊಡ್ಡಿದ್ದರು. ಆದರೆ, ನಾನು ಹಣ ತೆಗೆದುಕೊಂಡಿಲ್ಲ. ಸೂಕ್ತ ಸ್ಥಾನಮಾನ ನೀಡುವ ಭರವಸೆ ಸಿಕ್ಕಿದ್ದ ಕಾರಣ ಬಿಜೆಪಿಗೆ ಹೋಗಿದ್ದಾಗಿ ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಹೇಳಿದ್ದರು.