ಮೈಸೂರು, ಸ.12 (DaijiworldNews/HR): ಸುಪ್ರೀಂಕೋರ್ಟ್ ನಿಯಮದಂತೆ ಮೈಸೂರಿನಲ್ಲಿರುವ ಸುಮಾರು 90ರಷ್ಟು ದೇವಾಲಯಗಳನ್ನು ನೆಲಸಮ ಮಾಡಲು ಜಿಲ್ಲಾಡಳಿತ ಮುಂದಾಗಿದ್ದು, ಇದರ ವಿರುದ್ಧ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, "ಕೇವಲ ಹಿಂದೂ ದೇವಾಲಯಗಳನ್ನು ಮಾತ್ರ ಟಾರ್ಗೆಟ್ ಮಾಡುತ್ತಿರುವುದು ಯಾಕೆ. ಅಲ್ಲದೇ, ದೇವಸ್ಥಾನಗಳನ್ನು ಮಾತ್ರ ಯಾಕೆ ನೆಲಸಮಗೊಳಿಸಲಾಗುತ್ತಿದೆ. ಚರ್ಚೆ, ಮಸೀದಿಗಳು ಕಾಣಿಸುತ್ತಿಲ್ಲವೇ" ಎಂದಿದ್ದಾರೆ.
ಇನ್ನು "ಜಿಲ್ಲಾಡಳಿತ ಎಲ್ಲದಕ್ಕೂ ಸುಪ್ರೀಂಕೋರ್ಟ್ ಆದೇಶ ಎಂದು ಹೇಳಲಾಗುತ್ತದೆ. 2009ರಲ್ಲಿ ಸುಪ್ರೀಂಕೋರ್ಟ್ ಮಧ್ಯಂತರ ಆದೇಶ ನೀಡಿದೆ. 8 ವಾರದೊಳಗೆ ತೀರ್ಪು ಅನುಷ್ಠಾನದ ವರದಿ ನೀಡುವಂತೆ ಮುಖ್ಯಕಾರ್ಯದರ್ಶಿಗೆ ಸೂಚಿಸಲಾಗಿದೆ. 2009 ರಲ್ಲೇ ದೇವಸ್ಥಾನ, ಚರ್ಚೆ ಮಸೀದಿ ತಲೆ ಎತ್ತಲು ಬಿಡಬೇಡಿ ಎಂದು ಸೂಚನೆ ನೀಡಲಾಗಿದೆ. ಬಳಿಕವೂ ಕ್ಯಾತಮಾರನಹಳ್ಳಿಯಲ್ಲಿ ಮಸೀದಿ ತಲೆ ಎತ್ತಲು ಅನುಮತಿ ನೀಡಿಲ್ಲವಾ" ಎಂದು ಪ್ರಶ್ನಿಸಿದ್ದಾರೆ.