ಕಾಶ್ಮೀರ, ಸೆ.12 (DaijiworldNews/PY): ಜಮ್ಮು-ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ದಂಗಿವಾಚಿಯ ಮೇಲ್ಭಾಗದಲ್ಲಿ ಭಾನುವಾರ ಬೆಳಗ್ಗೆ ಮೇಘಸ್ಪೋಟಗೊಂಡ ಪರಿಣಾ ಓರ್ವ ಸಾವನ್ನಪ್ಪಿದ್ದು, ನಾಲ್ವರು ಕಾಣೆಯಾಗಿದ್ದಾರೆ.
ವರದಿಗಳ ಪ್ರಕಾರ, ರಫಿಯಾಬಾದ್ನಲ್ಲಿ ಐದು ಜನರ ಕುಟುಂಬ ಮೇಘಸ್ಪೋಟದಿಂದ ಕೊಚ್ಚಿ ಹೋಗಿದೆ. ಇಲ್ಲಿಯವರೆಗೆ ಓರ್ವನ ಶವ ಪತ್ತೆಯಾಗಿದ್ದು, ಉಳಿದವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ಘಟನಾ ಸ್ಥಳದಲ್ಲಿ ಮೊಬೈಲ್ ಸಂಪರ್ಕವೂ ದುರ್ಬಲವಾಗಿದೆ ಎನ್ನಲಾಗಿದೆ.