ಬೆಂಗಳೂರು, ಸೆ.12 (DaijiworldNews/PY): "ಕರ್ನಾಟಕವು ನಿತ್ಯ ಸರಾಸರಿ 3.8 ಲಕ್ಷ ಡೋಸ್ ಲಸಿಕೆ ನೀಡುತ್ತಿದ್ದು ರಷ್ಯಾ, ಫ್ರಾನ್ಸ್ ಹಾಗೂ ಕೆನಡಾ ದೇಶಗಳನ್ನು ಹಿಂದಿಕ್ಕಿದೆ" ಎಂದು ಬಿಜೆಪಿ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, "ರಾಜ್ಯದಲ್ಲಿ ಲಸಿಕಾ ಅಭಿಯಾನ ವೇಗಕಂಡುಕೊಳ್ಳುತ್ತಿದ್ದು ವಿದೇಶಗಳಿಗೆ ಹೋಲಿಸಿದ್ದಲ್ಲಿ ಕರ್ನಾಟಕ ರಾಜ್ಯದ ಸಾಧನೆ ಅದ್ವಿತೀಯವಾಗಿದೆ. ಕರ್ನಾಟಕವು ನಿತ್ಯ ಸರಾಸರಿ 3.8 ಲಕ್ಷ ಡೋಸ್ ಲಸಿಕೆ ನೀಡುತ್ತಿದ್ದು ರಷ್ಯಾ, ಫ್ರಾನ್ಸ್ ಹಾಗೂ ಕೆನಡಾ ದೇಶಗಳನ್ನು ಹಿಂದಿಕ್ಕಿದೆ" ಎಂದಿದೆ.
"ರಾಜ್ಯದಲ್ಲಿ ಶನಿವಾರ 801 ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 29,60,931ಕ್ಕೆ ಏರಿಕೆಯಾಗಿದೆ. 15 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 37,487ಕ್ಕೆ ಏರಿಕೆಯಾಗಿದೆ" ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಕರ್ನಾಟಕವು ನಿತ್ಯ ಸರಾಸರಿ 3.8 ಲಕ್ಷ ಡೋಸ್ ಲಸಿಕೆ ನೀಡುತ್ತಿದ್ದು, ವಿದೇಶಗಳಿಗೆ ಹೋಲಿಸಿದರೆ ಕರ್ನಾಟಕ ರಾಜ್ಯದ ಸಾಧನೆ ಅದ್ವಿತೀಯವಾಗಿದೆ.