ಹೈದರಾಬಾದ್, ಸ.12 (DaijiworldNews/HR): ಬೈಕ್ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ತೆಲುಗು ನಟ ಸಾಯಿ ಧರ್ಮ ತೇಜ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿರುವುದಾಗಿ ಅಪೊಲೊ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಸಾಯಿಧರ್ಮ ತೇಜ್ ಅವರನ್ನು ಹೈದರಾಬಾದ್ ನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿತಿ ಚೆನ್ನಾಗಿದೆ, ಆದರೆ ಅವರು ಇದೀಗ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ನಟ ಸಾಯಿ ಧರ್ಮ ತೇಜ್ ನ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಪ್ರಾಥಮಿಕ ತನಿಖೆಗಳ ಆಧಾರದ ಮೇಲೆ, ಮೆದುಳು, ಬೆನ್ನುಮೂಳೆ ಮತ್ತು ಪ್ರಮುಖ ಅಂಗಗಳಿಗೆ ಯಾವುದೇ ದೊಡ್ಡ ಗಾಯಗಳಾಗಿಲ್ಲ. ಅವರ ಅಂಗಾಂಶಗಳು ಹಾನಿಗೊಳಗಾಗಿವೆ ಮತ್ತು ಕಾಲರ್ ಬೋನ್ ನಲ್ಲಿ ಮುರಿತಗಳಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.