ನವದೆಹಲಿ, ಸ.12 (DaijiworldNews/HR): 2020-21ನೇ ಸಾಲಿನ ನೀಟ್ ಪರೀಕ್ಷೆ ಇಂದು ಮಧ್ಯಾಹ್ನ 2 ಗಂಟೆಯಿಂದ ಸಂಜೆ 5ರವರೆಗೆ ದೇಶದ 201 ನಗರಗಳಲ್ಲಿ ನಡೆಯಲಿದ್ದು, ವೈದ್ಯಕೀಯ ಮತ್ತು ದಂತ ವೈದ್ಯಕೀಯ ಹಾಗೂ ಆಯುಷ್ ಕೋರ್ಸುಗಳಿಗೆ ಪರೀಕ್ಷೆ ಮಾಡಲಾಗುತ್ತಿದೆ.
ಸಾಂಧರ್ಭಿಕ ಚಿತ್ರ
ಕರ್ನಾಟಕದಲ್ಲಿ ಬೆಂಗಳೂರು, ಬೆಳಗಾವಿ, ದಾವಣಗೆರೆ, ಧಾರವಾಡ, ಗುಲ್ಬರ್ಗಾ, ಹುಬ್ಬಳ್ಳಿ, ಮೈಸೂರು, ಮಂಗಳೂರು ಮತ್ತು ಉಡುಪಿಯಲ್ಲಿಯಲ್ಲಿ ಪರೀಕ್ಷೆ ನಡೆಯಲಿದೆ.
ಕಡಿಮೆ ಹೀಲ್ಸ್ ಚಪ್ಪಲಿಗಳನ್ನು ಅನುಮತಿಸಲಾಗಿದ್ದು, ಬೂಟುಗಳನ್ನು ಅನುಮತಿಸಲಾಗುವುದಿಲ್ಲ, ಕಿವಿಯೋಲೆಗಳು, ಮೂಗುತಿಗಳು, ಉಂಗುರಗಳು, ಪದಕಗಳು, ನೆಕ್ಲೇಸ್ ಗಳು, ಬ್ರೇಸ್ ಲೆಟ್ ಗಳು ಮತ್ತು ಕಾಲ್ಗೆಜ್ಜೆಗಳಂತಹ ಯಾವುದೇ ರೀತಿಯ ಆಭರಣಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಇನ್ನು ಪುರುಷ ಅಭ್ಯರ್ಥಿಗಳಿಗೆ ಅರ್ಧ ತೋಳಿನ ಶರ್ಟ್ ಗಳು, ಟಿ-ಶರ್ಟ್ ಗಳು, ಪ್ಯಾಂಟ್ ಗಳು ಮತ್ತು ಸರಳ ಪ್ಯಾಂಟ್ ಗಳನ್ನು ಧರಿಸುವಂತೆ ಸೂಚಿಸಲಾಗಿದೆ. ಪೂರ್ಣ ತೋಳಿನ ಶರ್ಟ್ ಗಳಿಗೆ ಅನುಮತಿ ಇಲ್ಲ.