ನವದೆಹಲಿ, ಸೆ. 12 (DaijiworldNews/PY): "ಅಫ್ಗಾನ್ ನೆಲದಲ್ಲಿ ಯಾವುದೇ ರೀತಿಯಲ್ಲೂ ಭಯೋತ್ಪಾದನಾ ಚಟುವಟಿಕೆಗಳಿಗೆ ದುರ್ಬಳಕೆ ಮಾಡಿಕೊಳ್ಳಬಾರದು" ಎಂದು ತಾಲಿಬಾನ್ ಆಡಳಿತಕ್ಕೆ ಭಾರತ ಹಾಗೂ ಆಸ್ಟ್ರೇಲಿಯಾ ಎಚ್ಚರಿಕೆ ನೀಡಿವೆ.
ಉಭಯ ರಾಷ್ಟ್ರಗಳು ಶನಿವಾರ ನಡೆದ 2+2 ಶೃಂಗ ಸಭೆಯಲ್ಲಿ ಭಾಗವಹಿಸಿದ್ದವು. ಈ ಸಂದರ್ಭ ಆಸ್ಟ್ರೇಲಿಯಾದ ಮರೈಸ್ ಪೇಯ್ನ ಹಾಗೂ ಪೀಟರ್ ಡಟ್ಟನ್ ಜೊತೆ, ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ರಕ್ಷಣ ಸಚಿವ ರಾಜನಾಥ್ ಸಿಂಗ್ ಮಾತುಕತೆ ನಡೆಸಿದ್ದಾರೆ.
"ಅಫ್ಗಾನ್ ನೆಲದಲ್ಲಿ ತಾಲಿಬಾನ್ ಯಾವುದೇ ರೀತಿಯಾದ ಉಗ್ರ ಚಟುವಟಿಕೆಗಳನ್ನು ಮಾಡುವಂತಿಲ್ಲ. ಉಗ್ರವಾದದೊಂದಿಗೆ ಉಭಯ ರಾಷ್ಟ್ರಗಳು ರಾಜಿ ಮಾಡಿಕೊಳ್ಳುವಂತಿಲ್ಲ. ಇಂಡೋ-ಫೆಸಿಫಿಕ್ ಸಾಗರ ವಲಯದಲ್ಲಿ ಪರಸ್ಪರ ಸ್ವತಂತ್ರ, ಸಹಬಾಳ್ವೆಯಿಂದ ಕಾರ್ಯ ನಿರ್ವಹಿಸಬೇಕು. ಪರಸ್ಪರ ರಕ್ಷಣ ಸೇರಿದಂತೆ ವಾಣಿಜ್ಯ ಒಪ್ಪಂದಗಳಿಗೆ ಉಭಯ ರಾಷ್ಟ್ರಗಳು ಬದ್ದವಾಗಿರಬೇಕು" ಎನ್ನುವ ತೀರ್ಮಾನ ಕೈಗೊಳ್ಳಲಾಗಿದೆ.