ಶಿವಮೊಗ್ಗ, ಸ.11 (DaijiworldNews/HR): ಮೈಸೂರು ಗ್ಯಾಂಗ್ ರೇಪ್ ಪ್ರಕರಣದ ಕುರಿತು ತನಿಖೆ ನಡೆಸಲು ಶೀಘ್ರದಲ್ಲೇ ವಿಶೇಷ ಪ್ಯಾಸಿಕ್ಯೂಟರ್ ನೇಮಕ ಮಾಡಲಾಗುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಂತ್ರಸ್ತೆ ಪೋಷಕರ ಮನವೊಲಿಸುವ ಕೆಲಸ ಮಾಡಲಾಗುತ್ತಿದ್ದು, ಅಗತ್ಯಬಿದ್ದರೆ ಪ್ಯಾಸಿಕ್ಯೂಟರುಗಳ ನೇಮಕ ಮಾಡಲಾಗುತ್ತದೆ. ಈ ಕುರಿತು ತನಿಖೆ ನಡೆಸಲು ಮುಂದಿನ ದಿನಗಳಲ್ಲಿ ವಿಶೇಷ ಪ್ಯಾಸಿಕ್ಯೂಟರುಗಳ ನೇಮಕ ಮಾಡಲಾಗುತ್ತದೆ" ಎಂದರು.
ಇನ್ನು ಅನುಶ್ರೀ ಡ್ರಗ್ಸ್ ಕೇಸ್ ಆರೋಪಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, "ಸುಖಾ ಸುಮ್ಮನೆ ಯಾರನ್ನು ಅರೆಸ್ಟ್ ಮಾಡಲ್ಲ, ಡ್ರಗ್ಸ್ ಪ್ರಕರಣದ ಬಗ್ಗೆ ತನಿಖೆ ನಡೆಸಲು ಪೊಲೀಸರು ಹಗಲಿರುಳು ಕೆಲಸ ಮಾಡುತ್ತಿದ್ದಾರೆ. 2 ವರ್ಷದಲ್ಲಿ ಪೊಲೀಸರು ಅನೇಕ ಡ್ರಗ್ಸ್ ಕಾರ್ಯಾಚರಣೆ ನಡೆಸಿ ಹಲವು ಪ್ರಕರಣಗಳನ್ನು ಭೇದಿಸಿದ್ದಾರೆ" ಎಂದು ಹೇಳಿದ್ದಾರೆ.