ನವದೆಹಲಿ, ಸ.11 (DaijiworldNews/HR): ಎಐಎಂಐಎಂ ಮುಖಂಡ ಅಸಾದುದ್ದೀನ್ ಓವೈಸಿ ಅವರೊಂದು 'ವೈರಸ್' ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ರಾಧಾ ಮೋಹನ್ ಸಿಂಗ್ ಅವರು ಕರೆದು ವಿವಾದ ಸೃಷ್ಟಿಸಿಕೊಂಡಿದ್ದಾರೆ.
ಮೈನಾರಿಟಿ ಮೋರ್ಚಾ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಿಂಗ್, ವೈರಸ್ನ್ನು ನಿರ್ಣಾಮಗೊಳಿಸಲು ಮೈನಾರಿಟಿ ಮೋರ್ಚವೇ ದೊಡ್ಡ ಲಸಿಕೆ ಎಂದಿದ್ದು, ಓವೈಸಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇನ್ನು ಈ ವಾರದ ಆರಂಭದಲ್ಲಿ ಓವೈಸಿ ಉತ್ತರ ಪ್ರದೇಶಕ್ಕೆ ಮೂರು ದಿನಗಳ ಭೇಟಿಗೆಂದು ಬಂದಿದ್ದ ಓವೈಸಿ ಮಾತನಡಿ, "2022 ರ ಚುನಾವಣೆಯಲ್ಲಿ ನಮ್ಮ ಪಕ್ಷವು ಉತ್ತರ ಪ್ರದೇಶದಲ್ಲಿ ತನ್ನ ಅಸ್ತಿತ್ವವನ್ನು ತೋರಿಸುತ್ತದೆ. ಸಮಾಜವಾದಿ ಪಾರ್ಟಿ ಮತ್ತು ಬಿಎಸ್ಪಿಯಂತಹ ಪಕ್ಷಗಳಿಂದ ಅಲ್ಪಸಂಖ್ಯಾತರು ವಂಚನೆಗೊಳಗಾಗಿದ್ದಾರೆ. ಅಖಿಲೇಶ್ ಯಾದವ್ ಮತ್ತು ಮಾಯಾವತಿ ಬಿಜೆಪಿ ಬೆದರಿಕೆಯ ಹೆಸರೇಳಿಕೊಂಡು ಮುಸ್ಲಿಮರ ಮತಗಳನ್ನು ಪಡೆಯುತ್ತಾರೆ. ಆದರೆ ಎಂದಿಗೂ ಅವರ ಸಮಸ್ಯೆಗಳಿಗೆ ಪರಿಹಾರವಾಗಿ ಇದುವರೆಗೂ ನಿಂತಿಲ್ಲ" ಎಂದು ಆರೋಪಿಸಿದ್ದರು.