ಕೇರಳ, ಸ.11 (DaijiworldNews/HR): ಮಲಯಾಳಂನ ಖ್ಯಾತ ಕಿರುತೆರೆ ನಟ ರಮೇಶ ವಲಿಯಾಸಾಳ ಶನಿವಾರದಂದು ನಿಗೂಢವಾಗಿ ಸಾವಿಗೆ ಶರಣಾಗಿದ್ದಾರೆ.
ರಮೇಶ ವಲಿಯಾಸಾಳ ಸಾವು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿದೆ.
ರಮೇಶ್ರ ಮೃತದೇಹ ಅವರ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ಸಂಬಂಧ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ರಮೇಶ್ ಅವರು 2 ದಿನಗಳ ಹಿಂದಷ್ಟೇ ತಮ್ಮ ಇತ್ತೀಚಿನ ಪ್ರಾಜೆಕ್ಟ್ ಶೂಟಿಂಗ್ ಮುಗಿಸಿ ಶೂಟಿಂಗ್ ಸ್ಥಳದಿಂದ ವಾಪಸ್ಸಾಗಿದ್ದರು ಎನ್ನಲಾಗಿದೆ.
ಮಲಯಾಳಂನ ಖ್ಯಾತ ಕಿರುತೆರೆ ನಟರಾಗಿರುವ ರಮೇಶ್ ಸಿನಿಮಾಗಳಲ್ಲೂ ನಟಿಸಿದ್ದಾರೆ.