ನವದೆಹಲಿ, ಸೆ 11 (DaijiworldNews/MS): ಕೇಂದ್ರದ ವಿಶೇಷ ಸಾರ್ವಜನಿಕ ಕಾರ್ಯಕ್ರಮದ ಭಾಗವಾಗಿ, ಪ್ರಧಾನಿ ನರೇಂದ್ರ ಮೋದಿಯವರ ಮಂತ್ರಿ ಮಂಡಳಿಯ ಸುಮಾರು 70 ಸಚಿವರು ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲಿದ್ದಾರೆ.
ಮುಂದಿನ 9 ವಾರಗಳಲ್ಲಿ 70 ಕೇಂದ್ರ ಸಚಿವರು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲಿದ್ದಾರೆ ಅಂತ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮಾಹಿತಿ ನೀಡಿದ್ದಾರೆ.
ಸೆ.10 ರಿಂದ ಈ ಭೇಟಿ ಪ್ರಾರಂಭವಗಿದ್ದು ಪ್ರತಿ ವಾರ ಸಚಿವರು ಕೇಂದ್ರಾಡಳಿತ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ . ಕನಿಷ್ಠ 10ಸಚಿವರು ಮುಂದಿನ 7 ದಿನಗಳ ಒಳಗೆ ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳಲಿದ್ದಾರೆ.
ಇವರ ಭೇಟಿಯ ಸಮಯದಲ್ಲಿ, ಮಂತ್ರಿಗಳು ಸಾರ್ವಜನಿಕರು, ಆಡಳಿತ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳೊಂದಿಗೆ ಜಮ್ಮು ಕಾಶ್ಮೀರದ ಜನ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಸಂವಾದ ನಡೆಸಲಿದ್ದಾರೆ.
ಭೇಟಿ ಮೊದಲ ಹಂತದಲ್ಲಿ ಸಚಿವರಾದ ಸ್ಮೃತಿ ಇರಾನಿ, ಅರ್ಜುನ್ ಮುಂಡಾ ಮತ್ತು ಮಹಿಂದರ್ ನಾಥ್ ಪಾಂಡೆ ಭೇಟಿ ನೀಡಲಿದ್ದಾರೆ.