ನವದೆಹಲಿ, ಸೆ 11 (DaijiworldNews/MS): ರಾಷ್ಟ್ರ ರಾಜಧಾನಿಯಲ್ಲಿ ನವದೆಹಲಿಯಲ್ಲಿರುವ ಇಂದಿರಾಗಾಂಧಿ ವಿಮಾನ ನಿಲ್ದಾಣದ (ಐಜಿಐ) ವಿಮಾನ ನಿಲ್ದಾಣದ ಕೆಲವು ಭಾಗಗಳು ಭಾರೀ ಮಳೆಯಿಂದಾಗಿ ಜಲಾವೃತಗೊಂಡಿವೆ.
ಸುದ್ದಿ ಸಂಸ್ಥೆ ಯೊಂದು ಹಂಚಿಕೊಂಡ ದೃಶ್ಯಗಳಲ್ಲಿ ಭಾಗಶಃ ಪ್ರವಾಹಕ್ಕೆ ವಿಮಾನವು ಸಿಲುಕಿರುವ ರನ್ ವೇನಲ್ಲಿ ನಿಲ್ಲಿಸಿರುವುದನ್ನು ತೋರಿಸಿದೆ.
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪ್ರಕಾರ, ದೆಹಲಿಯು ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿದ್ದು ಭಾರೀ ಮಳೆ ಗುಡುಗು ಸಹಿತ ಮಳೆ ಹಾಗೂ ರಾತ್ರಿ ಸಮಯದಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಂಭವವಿದೆ ಎಂದು ಹೇಳಿದೆ