ಅಹಮದಾಬಾದ್, ಸೆ. 11 (DaijiworldNews/PY): "ಗುಜರಾತ್ ಸರ್ಕಾರ ಲವ್ ಜಿಹಾದ್ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಲಿದೆ" ಎಂದು ಗುಜರಾತ್ ಸಿಎಂ ವಿಜಯ್ ರೂಪಾನಿ ಹೇಳಿದ್ದಾರೆ.
ಪಶುಸಂಗೋಪನೆ ವೃತ್ತಿಯಲ್ಲಿ ತೊಡಗಿರುವ ಮಲ್ದಾರಿ ಸಮುದಾಯದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, "ಸರ್ಕಾರ, ಗೋಹತ್ಯೆಯಲ್ಲಿ ತೊಡಗಿರುವವ ವಿರುದ್ದ ಕೂಡಾ ಕಠಿಣ ಕ್ರಮ ಕೈಗೊಳ್ಳಲಿದೆ" ಎಂದು ತಿಳಿಸಿದ್ದಾರೆ.
"ಲವ್ ಜಿಹಾದ್ ವಿರುದ್ದ ಕಠಿಣ ಕಾನೂನು ಜಾರಿ ಮಾಡಲಿದ್ದು, ಹಿಂದೂ ಸಮುದಾಯದ ಹೆಣ್ಣು ಮಕ್ಕಳನ್ನು ಬಲೆಗೆ ಬೀಳಿಸುವ ಹಾಗೂ ಅವರನ್ನು ಕರೆದುಕೊಂಡು ಹೋಗುವವರ ವಿರುದ್ದ ಕೂಡಾ ಗುಜರಾತ್ ಸರ್ಕಾರ ಕ್ರಮ ಕೈಗೊಳ್ಳಲಿದೆ" ಎಂದು ಹೇಳಿದ್ದಾರೆ.
"ಸರ್ಕಾರವು ಕಠಿಣ ನಿಯಮಗಳೊಂದಿಗೆ ಹಲವಾರು ಕಾನೂನುಗಳನ್ನು ತಂದಿದೆ. ಗೋಹತ್ಯೆ ವಿರುದ್ದ, ಭೂಗಳ್ಳರು, ಸರಗಳ್ಳರ ವಿರುದ್ದ ಸರ್ಕಾರ ಕಠಿಣ ಕ್ರಮ ತೆಗದುಕೊಳ್ಳಲಿದೆ" ಎಂದಿದ್ದಾರೆ.