ನವದೆಹಲಿ, ಸೆ. 10 (DaijiworldNews/SM): ಆರ್.ಎಸ್.ಎಸ್. ಹಾಗೂ ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಜಮ್ಮು ಕಾಶ್ಮೀರದ ಸಂಸ್ಕೃತಿ ಒಡೆಯುವುದು ಇವರ ಅಜೆಂಡಾ ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ಜಮ್ಮು ಪ್ರವಾಸದಲ್ಲಿರುವ ರಾಹುಲ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿ ಈ ವಿಚಾರ ತಿಳಿಸಿದ್ದಾರೆ. "ನಿಮ್ಮೆಲ್ಲರ ನಡುವೆ ಪ್ರೀತಿ, ಸಹೋದರತ್ವ ಮತ್ತು ಸಮ್ಮಿಶ್ರ ಸಂಸ್ಕೃತಿಯ ಭಾವನೆ ಇದೆ. ಈ ಸಂಸ್ಕೃತಿಯನ್ನು ಮುರಿಯಲು ಆರ್ಎಸ್ಎಸ್ ಮತ್ತು ಬಿಜೆಪಿ ಪ್ರಯತ್ನಿಸುತ್ತಿರುವುದಕ್ಕೆ ನನಗೆ ಬೇಸರವಾಗಿದೆ" ಎಂದರು.