ಬೆಂಗಳೂರು, ಸೆ. 10 (DaijiworldNews/PY): "ರಾಜ್ಯ ಸರ್ಕಾರ, ಕೊರೊನಾ ಪೀಡಿತ ಬಡವರಿಗೆ ನೆರವಾಗುವ ನಿಟ್ಟಿನಲ್ಲಿ ಶೀಘ್ರವೇ ವಿಶೇಷ ಕಾರ್ಯಕ್ರಮವೊಂದನ್ನು ರೂಪಿಸಲಿದೆ" ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
"ಕೊರೊನಾ ಸಾಂಕ್ರಾಮಿಕವು ಜನರ ಮೇಲೆ ಪರಿಣಾಮ ಬೀರಿದ್ದು, ಅನೇಕ ಮಕ್ಕಳು ತಮ್ಮ ಪೋಷಕರನ್ನು ಕಳೆದುಕೊಂಡಿದ್ದಾರೆ. ಅಲ್ಲದೇ, ಅನೇಕ ಕುಟುಂಬಗಳು ಮಕ್ಕಳನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಇವರೆಲ್ಲರಿಗೂ ಸಾಮಾಜಿಕ ಭದ್ರತೆಯ ಅವಶ್ಯಕತೆ ಇದೆ" ಎಂದು ತಿಳಿಸಿದ್ದಾರೆ.
"ಈ ಹಿಂದೆ ಘೋಷಣೆ ಮಾಡಲಾದ ಆರ್ಥಿಕ ನೆರವಿನೊಂದಿಗೆ ಮಕ್ಕಳ ಶಿಕ್ಷಣ ಮುಂದಿವರಿಸಲು. ಅವರ ಆರೋಗ್ಯದ ಆರೈಕೆ ಸೇರಿದಂತೆ, ಅವರು ಇತರರ ಮೇಲೆ ಅವಲಂಬಿತರಾಗದಂತೆ ಮಾಡಲು ಸರ್ಕಾರ ಶೀಘ್ರದಲ್ಲೇ ಕಾರ್ಯಕ್ರಮವೊಂದನ್ನು ರೂಪಿಸಲಿದೆ" ಎಂದಿದ್ದಾರೆ.
"ಈ ಬಗ್ಗೆ ಸಂಬಂಧಿತ ಇಲಾಖೆಗಳಿಂದ ಮಾಹಿತಿಗಳನ್ನು ಪಡೆದ ಬಳಿಕ ಶೀಘ್ರವೇ ಕಾರ್ಯಕ್ರಮದ ವಿವರಗಳನ್ನು ಪ್ರಕಟಿಸಲಾಗುತ್ತದೆ" ಎಂದು ಸಿಎಂ ಅವರ ಕಾರ್ಯಾಲಯದ ಮೂಲಗಳು ತಿಳಿಸಿವೆ.