ಶ್ರೀನಗರ, ಸೆ. 10 (DaijiworldNews/PY): "ಬಿಜೆಪಿ ಹಾಗೂ ಆರ್ಎಸ್ಎಸ್ ಜಮ್ಮು-ಕಾಶ್ಮೀರದ ಸಂಯೋಜಿತ ಸಂಸ್ಕೃತಿಯನ್ನು ಕೆಡವಲು ಯತ್ನಿಸುತ್ತಿವೆ" ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಜಮ್ಮುವಿನ ತ್ರಿಕೂಟ ನಗರದಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, "ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿದ ಸಂದರ್ಭವೆಲ್ಲಾ ನನ್ನ ಮನೆಗೆ ಬಂದಂತೆ ಭಾಸವಾಗುತ್ತದೆ. ನನ್ನ ಕುಟುಂಬವು ಇದರೊಂದಿಗೆ ದೀರ್ಘ ಸಂಬಂಧ ಹೊಂದಿದೆ" ಎಂದಿದ್ದಾರೆ.
"ಈ ಸಂದರ್ಭ ಆರ್ಎಸ್ಎಸ್ ಹಾಗೂ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿರುವ ಅವರು, ಜಮ್ಮು-ಕಾಶ್ಮೀರ ಸಂಯೋಜಿತ ಸಂಸ್ಕೃತಿ ಹೊಂದಿದ್ದು, ಆರ್ಎಸ್ಎಸ್ ಹಾಗೂ ಬಿಜೆಪಿ ಅದನ್ನು ಒಡೆಯಲು ನೋಡುತ್ತಿದೆ" ಎಂದಿದ್ದಾರೆ.