ಬೆಂಗಳೂರು, ಸ.10 (DaijiworldNews/HR): 10 ವರ್ಷದ ಬಾಲಕನಿಗೆ ಚಿತ್ರಹಿಂಸೆ ನೀಡಿ ಹತ್ಯೆ ಮಾಡಿರುವ ತಾಯಿ ಮತ್ತು ರೌಡಿಶೀಟರ್ ಅನ್ನು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸಾಂಧರ್ಭಿಕ ಚಿತ್ರ
ಪತಿ ತೊರೆದಿದ್ದ ಮಹಿಳೆಯೊಬ್ಬರು ಮಗುವನ್ನು ನೋಡಿಕೊಳ್ಳಲು ಕಷ್ಟವಾಗಿದ್ದು, ಮಗುವನ್ನು ರೌಡಿಶೀಟರ್ ಬಳಿ ಬಿಟ್ಟಿದ್ದಳು. ಆದರೆ ಮಗುವಿಗೆ ಪ್ರತಿ ದಿನವೂ ಚಿತ್ರಹಿಂಸೆ ನೀಡಿ ರೌಡಿಶೀಟರ್ ತೊಂದರೆ ಕೊಡುತ್ತಿದ್ದ. ಫೆಬ್ರವರಿಯಲ್ಲಿ ಕೊಠಡಿಯಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ಕೊಟ್ಟಾಗ ಬಾಲಕ ಪ್ರಾಣ ಬಿಟ್ಟಿದ್ದ. ಬಳಿಕ ಶವವನ್ನು ತಾಯಿ ಹಾಗೂ ರೌಡಿಶೀಟರ್ ತಮಿಳುನಾಡಿಗೆ ಸಾಗಿಸಿ ನಿರ್ಜನ ಪ್ರದೇಶದಲ್ಲಿ ಬಿಸಾಡಿದ್ದರು. ಕೊಲೆ ಪ್ರಕರಣ ದಾಖಲಿಸಿದ್ದ, ತಮಿಳುನಾಡು ಪೊಲೀಸರಿಗೆ ಗುರುತು ಪತ್ತೆಯಾಗಿರಲಿಲ್ಲ. 7 ತಿಂಗಳ ನಂತರ ಬಾಲಕನ ತಾಯಿ ನಾಪತ್ತೆಯ ಪ್ರಕರಣ ದಾಖಲಿಸಿದ್ದು, ತನಿಖೆಕೈಗೊಂಡ ಪೊಲೀಸರಿಗೆ ಹತ್ಯೆ ನಡೆಸಿರುವುದು ಬೆಳಕಿಗೆ ಬಂದಿದೆ.
ತಾಯಿ ಸಿಂಧು, ಮೈಕೊಲೇಔಟ್ ವ್ಯಾಪ್ತಿಯ ರೌಡಿಶೀಟರ್ ಸುನಿಲ್ ಬಳಿ ಮಗುವನ್ನು ಜನವರಿಯಲ್ಲಿ ಬಿಟ್ಟಿದ್ದಳು. ಮಗು ನೋಡಿಕೊಳ್ಳುತ್ತೇನೆ ಎಂದಿದ್ದ ಸುನಿಲ್ ಬಾಲಕನಿಗೆ ಪ್ರತಿದಿನವೂ ದೈಹಿಕ ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ.
ಇನ್ನು ಮರಣೋತ್ತರ ಪರೀಕ್ಷೆ ಮಾಡಿಸಿದ್ದ ತಮಿಳುನಾಡು ಪೊಲೀಸರಿಗೆ ಬಾಲಕನ ಗುರುತು ಪತ್ತೆಯಾಗಿರಲಿಲ್ಲ. ಅವರು ಕೊಲೆ ಪ್ರಕರಣವನ್ನು ದಾಖಲಿಸಿದ್ದರು. 7 ತಿಂಗಳ ನಂತರ ಬಾಲಕನ ತಾಯಿ ಮೈಕೋಲೇಔಟ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದು, ಪೊಲೀಸರು ತನಿಖೆ ಕೈಗೊಂಡಾಗ ದೈಹಿಕ ಹಿಂಸೆ ನೀಡಿ ಹತ್ಯೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಕೊಲೆ ಪ್ರಕರಣ ದಾಖಲಿಸಿ ಪೊಲೀಸರಿಂದ ತನಿಖೆ ನಡೆಸಲಾಗುತ್ತಿದ್ದು, ರೌಡಿಶೀಟರ್ ಸುನಿಲ್ ಹಾಗೂ ಸಿಂಧು ಅವರನ್ನು ಬಂಧಿಸಲಾಗಿದೆ.