ಲಕ್ನೋ, ಸೆ. 10 (DaijiworldNews/PY): "ಮುಂದಿನ ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಮಾಫಿಯಾ ವ್ಯಕ್ತಿಗೆ ಬಿಎಸ್ಪಿಯಿಂದ ಟಿಕೆಟ್ ಸಿಗದಂತೆ ಗಮನಹರಿಸಲಾಗುವುದು" ಎಂದು ಮಾಜಿ ಮುಖ್ಯಮಂತ್ರಿ ಮಾಯಾವತಿ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಮುಂಬರುವ ಯುಪಿ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್ಪಿ ಯಾವುದೇ ಬಲಿಷ್ಠ ಅಥವಾ ಮಾಫಿಯಾ ವ್ಯಕ್ತಿಗೆ ಟಿಕೆಟ್ ಸಿಗದಂತೆ ನೋಡಿಕೊಳ್ಳುತ್ತದೆ" ಎಂದಿದ್ದಾರೆ.
"ಬಿಎಸ್ಪಿ ರಾಜ್ಯ ಘಟಕದ ಅಧ್ಯಕ್ಷ ಭೀಮ್ ರಾಜ್ಭರ್ ಅವರನ್ನು ಮವು ವಿಧಾನಸಭೆ ಕ್ಷೇತ್ರದಿಂದ ಕಣಕ್ಕಿಳಿಸಲಾಗುವುದು" ಎಂದು ಮಾಯಾವತಿ ಘೋಷಣೆ ಮಾಡಿದ್ದಾರೆ.
ಬಿಎಸ್ಪಿ ಶಾಸಕರಾಗಿ ಮುಖ್ತಾರ್ ಅನ್ಸಾರಿ ಮವು ಕ್ಷೇತ್ರದಿಂದ ಐದು ಬಾರಿ ಆಯ್ಕೆಯಾಗಿದ್ದಾರೆ. ಅವರ ವಿರುದ್ದ ಕೊಲೆ, ದರೋಡೆಯಂತಹ 52 ಗಂಭೀರ ಪ್ರಕರಣಗಳು ದಾಖಲಾಗಿದ್ದು, ಸದ್ಯ ಅನ್ಸಾರಿ ಅವರು ಜೈಲಿನಲ್ಲಿದ್ದಾರೆ.