ಬೆಂಗಳೂರು, ಸೆ. 10 (DaijiworldNews/PY): "ಕೇಂದ್ರ ಸರ್ಕಾರ ಕೇವಲ 1.34 ಲಕ್ಷ ಕೋಟಿ ರೂ. ಆಯಿಲ್ ಬಾಂಡ್ ಹೆಸರು ಹೇಳಿಕೊಂಡು ದೇಶದ ಜನರಿಂದ 24 ಲಕ್ಷ ಕೋಟಿ ರೂ. ತೆರಿಗೆ ವಸೂಲಿ ಮಾಡಿದೆ" ಎಂದು ರಾಜ್ಯಸಭೆಯ ವಿರೋಧದ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕೇಂದ್ರ ಸರ್ಕಾರ ಕೇವಲ 1.34 ಲಕ್ಷ ಕೋಟಿ ರು. ಆಯಿಲ್ ಬಾಂಡ್ ಹೆಸರು ಹೇಳಿಕೊಂಡು ದೇಶದ ಜನತೆಗೆ 24 ಲಕ್ಷ ಕೋಟಿ ರೂ. ತೆರಿಗೆ ವಸೂಲಿ ಮಾಡಿದ್ದು, ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ತೈಲ ಬಾಂಡ್ಗಳ ಹೆಸರಿನಲ್ಲಿ ಜನರಿಂದ ಲೂಟಿ ಮಾಡಿದ ತೆರಿಗೆ ಮೊತ್ತವನ್ನು ಕೇಂದ್ರ ಸರ್ಕಾರ ಬಹಿರಂಗಪಡಿಸಲಿ" ಎಂದು ಒತ್ತಾಯಿಸಿದ್ದಾರೆ.
"ಈವರೆಗೆ ಕೇಂದ್ರ ಸರ್ಕಾರ ದೇಶದ ಜನರಿಂದ 24 ಲಕ್ಷ ಕೋಟಿ ರೂ. ತೆರಿಗೆ ವಸೂಲಿ ಮಾಡಿದೆ. ಇದಕ್ಕಿಂತ ಸುಲಿಗೆ ಬೇಕಾ? ಜನರಿಗೆ ಎಲ್ಲ ಸತ್ಯಗಳೂ ಈಗ ಅರ್ಥವಾಗುತ್ತಿವೆ. ಪ್ರಧಾನಿ ಮೋದಿ ಮಾಧ್ಯಮದವರನ್ನೂ ಸೇರಿದಂತೆ ತಮ್ಮ ವಿರುದ್ಧ ದನಿ ಎತ್ತುವ ಎಲ್ಲರನ್ನೂ ಹೆದರಿಸುತ್ತಿದ್ದಾರೆ" ಎಂದಿದ್ದಾರೆ.