ಭುವನೇಶ್ವರ, ಸೆ. 10 (DaijiworldNews/PY): ಗಣೇಶ ಹಬ್ಬದ ಪ್ರಯುಕ್ತ ಒಡಿಶಾದ ಕಲಾವಿದರೋರ್ವರು ಬೆಂಕಿ ಕಡ್ಡಿಗಳನ್ನು ಬಳಸಿ ಗಣೇಶನ ಮೂರ್ತಿ ರಚಿಸಿದ್ದಾರೆ.
ಕಲಾವಿದ ಸಾಸ್ವತ್ ಸಾಹೂ ಅವರು 5,621 ಬೆಂಕಿ ಕಡ್ಡಿಗಳನ್ನು ಬಳಸಿ ಗಣೇಶನ ಕಲಾಕೃತಿ ಮಾಡಿದ್ದು, ಇದು 23 ಇಂಚು ಉದ್ದ ಹಾಗೂ 22 ಇಂಚು ಅಗಲವಿದೆ.
"ಗಣೇಶನ ಮೂರ್ತಿ ಸಿದ್ದಪಡಿಸಲು ನನಗೆ ಎಂಡು ದಿನಗಳು ಬೇಕಾಯಿತು. ಕೊರೊನಾದ ನಡುವೆ ಗಣೇಶ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ನಡುವೆ ನಾನು ಏನಾದರೂ ಮಾಡಬೇಕೆಂದು ಯೋಜಿಸಿದ್ದು, ಈ ಗಣೇಶನ ಮೂರ್ತಿಯನ್ನು ತಯಾರಿಸಿದೆ. ಹಬ್ಬದ ದಿನದಂದು ನಾನೂ ಈ ಮೂರ್ತಿಯನ್ನು ಮನೆಯಲ್ಲಿಟ್ಟು ಪ್ರಾರ್ಥನೆ ಸಲ್ಲಿಸುತ್ತೇನೆ" ಎಂದು ಸಾಸ್ವತ್ ಸಾಹೂ ತಿಳಿಸಿದ್ದಾರೆ.