ಬೆಂಗಳೂರು, ಸ.10 (DaijiworldNews/HR): ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟಿದ ದಿನವಾದ ಸೆಪ್ಟಂಬರ್ 17 ಅನ್ನು ರಾಜ್ಯ ಬಿಜೆಪಿ ವತಿಯಿಂದ ಸೇವೆ ಮತ್ತು ಸಮರ್ಪಣೆ ದಿನವನ್ನಾಗಿ ಆಚರಿಸಲು ತೀರ್ಮಾನಿಸಲಾಗಿದೆ.
ಸೆಪ್ಟಂಬರ್ 17ಕ್ಕೆ ನರೇಂದ್ರ ಮೋದಿ 71ನೇ ವರ್ಷಕ್ಕೆ ಕಾಲಿಡುತ್ತಿದ್ದು, ವಿವಿಧ ಮೋರ್ಚಾಗಳ ಮೂಲಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಬಿಜೆಪಿ ನಿರ್ಧರಿಸಿದೆ.
ಮೋದಿಯವರ ಇದುವರೆಗಿನ ಜೀವನ ಕ್ರಮ, ಪ್ರಮುಖ ನಿರ್ಧಾರ ಗಳು, ಐತಿಹಾಸಿಕ ನಿರ್ಧಾರಗಳ ಬಗ್ಗೆ ಬೂತ್ ಮಟ್ಟದಲ್ಲಿ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.
ಇನ್ನು ಮಹಿಳಾ ಮೋರ್ಚಾದವರು ವಿಕಲಚೇತನರಿಗೆ ಅಗತ್ಯ ಸೌಲಭ್ಯಗಳನ್ನು ನೀಡುವ ಜವಾಬ್ದಾರಿ ವಹಿಸಲಾಗಿದ್ದು, ಒಬಿಸಿ ಮೋರ್ಚಾ ದವರು ಸಾರ್ವಜನಿಕರಿಗೆ ಲಸಿಕೆ ಹಾಕಿಸುವುದು. ಕೆರೆ ಸ್ವತ್ಛಗೊಳಿಸು ವುದು, ಸಾಧ್ಯವಾದರೆ ಹೂಳೆತ್ತುವುದು, ಕಲ್ಯಾಣಿಗಳ ಸ್ವತ್ಛತೆ ಹಾಗೂ ಅಲ್ಪಸಂಖ್ಯಾಕ ಘಟಕದ ವತಿಯಿಂದ ಅಲ್ಪಸಂಖ್ಯಾಕ ಮಹಿಳೆಯರಿಗೆ ಬಿಜೆಪಿ ಸರಕಾರ ನೀಡಿರುವ ಕೊಡುಗೆಗಳ ಬಗ್ಗೆ ಮಾಹಿತಿ ನೀಡಿ ಅರಿವು ಮೂಡಿಸುವ ಕೆಲಸ ಮಾಡುವ ಜವಾಬ್ದಾರಿ ವಹಿಸಲಾಗಿದೆ.
ಮಾಧ್ಯಮ ಮೋರ್ಚಾ ಕೂಡ ಪ್ರಧಾನಿಯವರ ಬಾಲ್ಯ ಜೀವನ, ಆಡಳಿತದಲ್ಲಿ ಅವರ ಕೊಡುಗೆ, ದೇಶದ ಘನತೆ ಹೆಚ್ಚಿಸಲು ಮಾಡಿರುವ ಕಾರ್ಯಕ್ರಮ, ಭಾರತ ವಿಶ್ವಗುರುವನ್ನಾಗಿಸಲು ಮಾಡಿರುವ ಶ್ರಮ, ಐತಿಹಾಸಿಕ ನಿರ್ಧಾರಗಳ ಬಗ್ಗೆ ಮಾಧ್ಯಮಗಳಲ್ಲಿ ಪ್ರಚಾರ ಮಾಡಲು ಮುಂದಾಗಿದೆ.