ನವದೆಹಲಿ, ಸ.09 (DaijiworldNews/HR): ಭಾರತದಲ್ಲಿ ಕೊರೊನಾದ ಎರಡನೇ ಅಲೆ ಇನ್ನೂ ಮುಂದುವರಿದಿದ್ದು, ಹೆಚ್ಚಿನ ಎಚ್ಚರ ಅತ್ಯಗತ್ಯ ಎಂದು ಕೇಂದ್ರ ಸರ್ಕಾರ ಗುರುವಾರ ಹೇಳಿದೆ.
ಸಾಂಧರ್ಭಿಕ ಚಿತ್ರ
ಕೇಂದ್ರ ಸರ್ಕಾರವು ಬಿಡುಗಡೆಗೊಳಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ ಈ ಕುರಿತು ತಿಳಿಸಿದ್ದು, "ದೇಶದಲ್ಲಿ ಕೊರೊನಾ ಎರಡನೇ ಅಲೆ ಇನ್ನೂ ಮುಗಿದಿಲ್ಲ. ಕೆಲವು ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೊರೊನಾ ಸೋಂಕು ಪ್ರಕರಣ ವರದಿಯಾಗುತ್ತಿದ್ದು, ಭಾರತದಲ್ಲಿನ 35 ಜಿಲ್ಲೆಗಳಲ್ಲಿ ವಾರದ ಕೊರೊನಾ ಪಾಸಿಟಿವಿಟಿ ದರ ಶೇ.10ಕ್ಕಿಂತಲೂ ಹೆಚ್ಚಿದೆ" ಎಂದು ಹೇಳಿದೆ.
ಇನ್ನು ಒಟ್ಟು ಪ್ರಕರಣಗಳಲ್ಲಿ ಶೇ.68.59ರಷ್ಟು ಕೊರೊನಾ ಸೋಂಕು ಪ್ರಕರಣ ಕೇರಳ ರಾಜ್ಯದಲ್ಲಿ ಪತ್ತೆಯಾಗಿದ್ದು, ಅಲ್ಲದೇ ಮುಂಬರುವ ಹಬ್ಬಗಳನ್ನು ಜನರು ಸರಳವಾಗಿ ಆಚರಿಸುವಂತೆ ಐಸಿಎಂಆರ್ ನ ಡಾ.ಬಲರಾಮ್ ಭಾರ್ಗವ್ ಅವರು ಸಲಹೆ ನೀಡಿದ್ದಾರೆ.