ನವದೆಹಲಿ, ಸೆ 09 (DaijiworldNews/MS): ಜಮ್ಮು ಮತ್ತು ಕಾಶ್ಮೀರ ಶಾಸಕಾಂಗ ಮಂಡಳಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ (NC) ನಾಯಕ, ಮಾಜಿ ಶಾಸಕ ತ್ರಿಲೋಚನ್ ಸಿಂಗ್ ವಾಜೀರ್ ಅವರ ಮೃತದೇಹ ಕೊಳೆತ ದೇಹವು ಗುರುವಾರ ಪಶ್ಚಿಮ ದೆಹಲಿಯ ಫ್ಲಾಟ್ ನಲ್ಲಿ ಪತ್ತೆಯಾಗಿದೆ.
67 ವರ್ಷದ ತ್ರಿಲೋಚನ್ ಸಿಂಗ್ ಅವರ ಶವ ಮೋತಿ ನಗರದಲ್ಲಿರುವ ಮೂರನೇ ಮಹಡಿಯ ಫ್ಲ್ಯಾಟ್ ನಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತ್ರಿಲೋಚನ್ ಸಿಂಗ್, ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಯ ಮಾಜಿ ಶಾಸಕರೂ ಆಗಿದ್ದರು. ಸೆಪ್ಟೆಂಬರ್ 3ರಿಂದ ಕಾಣೆಯಾಗಿದ್ದು ಅವರ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು.
ಅಪಾರ್ಮೆಂಟ್ ನಲ್ಲಿ ದುರ್ವಾಸನೆ ಬರಲಾರಂಭಿಸಿದನ್ನು ಗಮನಿಸಿದ ಫ್ಲ್ಯಾಟ್ ನಿವಾಸಿಗಳು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಬಂದು ತನಿಖೆ ಮಾಡಿದಾಗ, ಮನೆಯೊಳಗೆ ಶವ ಪತ್ತೆಯಾಗಿದೆ.ವಜೀರ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 ರ ಅಡಿಯಲ್ಲಿ ದೆಹಲಿ ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿದ್ದಾರೆ. ವಜೀರ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 ರ ಅಡಿಯಲ್ಲಿ ದೆಹಲಿ ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿದ್ದಾರೆ.