ಮೈಸೂರು,ಸ.09 (DaijiworldNews/HR): "ಸುಪ್ರೀಂ ಕೋರ್ಟ್ ತೀರ್ಪಿನಂತೆ ನಡೆಯುತ್ತಿರುವ ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವು ಕಾರ್ಯಾಚರಣೆಗೆ ಸಂಸದ ಪ್ರತಾಪ ಸಿಂಹ ಆಕ್ಷೇಪ ವ್ಯಕ್ತಪಡಿಸುವ ನೆಪದಲ್ಲಿ ಕೋಮುದ್ವೇಷ ಬಿತ್ತುತ್ತಿದ್ದಾರೆ" ಎಂದು ಶಾಸಕ ತನ್ವೀರ್ ಸೇಠ್ ಆರೋಪಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಜವಾಬ್ದಾರಿಯುತ ಸ್ಥಾನದಲ್ಲಿರುವವರಿಗೆ ಯಾವ ಸಂದರ್ಭದಲ್ಲಿ, ಏನು, ಹೇಗೆ ಮಾತನಾಡಬೇಕೆಂದು ತಿಳಿದಿರಬೇಕು. ಕೆಡಿಪಿ ಸಭೆಯಲ್ಲಿ ಜಿಲ್ಲಾಧಿಕಾರಿಗೆ ಧಮಕಿ ಹಾಕಿದರೆ, ನಾವು ಯಾರೂ ಬಳೆ ತೊಟ್ಟು ಕುಳಿತುಕೊಂಡಿಲ್ಲ" ಎಂದು ತಿರುಗೇಟು ನೀಡಿದ್ದಾರೆ.
ಇನ್ನು "ಚುನಾಯಿತ ಪ್ರತಿನಿಧಿ ಜನರ ರಕ್ಷಣೆಗೆ ನಿಲ್ಲಬೇಕೇ ಹೊರತು, ಪರಸ್ಪರ ಎತ್ತಿಕಟ್ಟುವುದಲ್ಲ. ಕೋಮು ಭಾವನೆ ಕೆರಳಿಸುವ ವಿಚಾರಗಳಲ್ಲಿ ರಾಜಕೀಯ ಮಾಡಬಾರದು. ಅನಧಿಕೃತ ಧಾರ್ಮಿಕ ಕಟ್ಟಡಗಳ ಪಟ್ಟಿಯನ್ನು ನಿನ್ನೆ ಮೊನ್ನೆ ತಯಾರಿಸಿ ಕೊಟ್ಟಿಲ್ಲ" ಎಂದು ಹೇಳಿದ್ದಾರೆ.