ಕೋಲ್ಕತ್ತ, ಸ.09 (DaijiworldNews/HR): ಬಂಕಿಮ್ ಮುಖರ್ಜಿ ಸಾರಣಿ ಪ್ರದೇಶದಲ್ಲಿ ಅಮೆಜಾನ್ ಹೆಸರಿನಲ್ಲಿ ನಕಲಿ ಕಾಲ್ ಸೆಂಟರ್ವೊಂದನ್ನು ತೆರೆದು ಜನರಿಗೆ ವಂಚಿಸುತ್ತಿದ್ದ 22 ಮಂದಿಯನ್ನು ನ್ಯೂ ಆಲಿಪುರದಲ್ಲಿ ಬಂಧಿಸಲಾಗಿದೆ.
ಸಾಂಧರ್ಭಿಕ ಚಿತ್ರ
ಕಾಲ್ ಸೆಂಟರ್ ಮೇಲೆ ಕೋಲ್ಕತ್ತ ಪೊಲೀಸ್ ಪತ್ತೇದಾರಿ ಇಲಾಖೆ ದಾಳಿ ನಡೆಸಿದ್ದು, ಯಾವುದೇ ಅಧಿಕೃತ ದಾಖಲೆಗಳು ಇಲ್ಲದೆಯೇ ಆರೋಪಿಗಳು ಕಾಲ್ ಸೆಂಟರ್ ನಡೆಸುತ್ತಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಂಟರ್ನೆಟ್ ಸಂಪರ್ಕ ವ್ಯವಸ್ಥೆಯ ಮೂಲಕ ಜನರಿಗೆ ಕರೆ ಮಾಡುತ್ತಿದ್ದ ಆರೋಪಿಗಳು ಅಮೆಜಾನ್ ಸಿಬ್ಬಂದಿ ಎಂದು ಪರಿಚಯಿಸಿಕೊಳ್ಳುತ್ತಿದ್ದು, ಜನರ ನಂಬಿಕೆ ಗಳಿಸಿ, ಅವರ ಉಡುಗೊರೆ ಮೊತ್ತವು ಜಮೆಯಾಗುತ್ತಿರುವುದಾಗಿ ತಿಳಿಸುತ್ತಿದ್ದರು ಎನ್ನಲಾಗಿದೆ.
ಇನ್ನು ಇವರ ಮೋಸದ ಜಾಲಗೆ ಬಹುತೇಕರು ಆಸ್ಟ್ರೇಲಿಯಾದ ನಿವಾಸಿಗಳಾಗಿದ್ದಾರೆ.
ಆರೋಪಿಗಳು ಟೀಂವ್ಯೂವರ್ ಮತ್ತು ಎನಿಡೆಸ್ಕ್ ರೀತಿಯ ಸಾಫ್ಟ್ವೇರ್ಗಳನ್ನು ಬಳಸಿಕೊಂಡು ಜನರ ಕಂಪ್ಯೂಟರ್ ಮೇಲೆ ನಿಯಂತ್ರಣ ಸಾಧಿಸುತ್ತಿದ್ದರು ಹಾಗೂ ಆಸ್ಟ್ರೇಲಿಯಾ ಡಾಲರ್ನಲ್ಲೇ ಪಾವತಿಸುವಂತೆ ಒತ್ತಾಯಿಸುತ್ತಿದ್ದರು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.