ಬೆಂಗಳೂರು, ಸ. 08 (DaijiworldNews/HR): ಸ್ಯಾಂಡಲ್ವುಡ್ನ ಖ್ಯಾತ ಆ್ಯಂಕರ್ ಹಾಗೂ ನಟಿ ಅನುಶ್ರೀ ಅವರ ಡ್ರಗ್ ಕೇಸ್ ವಿಚಾರಕ್ಕೆ ಸಂಬಂಧಪಟ್ಟಂತೆ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಹೇಳಿಕೆ ನೀಡಿದ್ದು, ಶೀಘ್ರದಲ್ಲೇ 28 ಸೆಕೆಂಡ್ಗಳ ಆಡಿಯೋ ಬಾಂಬ್ ಬಿಡುಗಡೆ ಮಾಡಿ, ರಾಜಕೀಯ ವ್ಯಕ್ತಿಯ ಪ್ರಭಾವ ಬಗ್ಗೆ ಮಾಹಿತಿ ನೀಡುತ್ತೇನೆ ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ನವೆಂಬರ್ 1ರಂದು ಶುಗರ್ ಡ್ಯಾಡಿ ಪುಸ್ತಕ ಬಿಡುಗಡೆ ಆಗಲಿದೆ ಹಾಗೂ ನಾಗೇಂದ್ರ ಪ್ರಸಾದ್ ಬರೆದಿರುವ ನಶೆ ನಶೆ ಹಾಡನ್ನು ಬಿಡುಗಡೆ ಮಾಡಲಾಗುವುದು. ಪುಸ್ತಕದಲ್ಲಿ ಶುಗರ್ಡ್ಯಾಡಿ ಯಾರು ಎಂಬುದನ್ನೂ ಬಹಿರಂಗಗೊಳಿಸುತ್ತೇನೆ ಎಂದಿದ್ಧಾರೆ.
ಇನ್ನು ಕರ್ನಾಟಕ ಉಡ್ತಾ ಪಂಜಾಬ್ ಆಗೊದನ್ನು ತಡೆಯಬೇಕಾಗಿದ್ದು, ಈ ಡ್ರಗ್ಸ್ ಪ್ರಕರಣವನ್ನ ರೀ-ಓಪನ್ ಮಾಡಬೇಕು. ಕೊರೊನಾ ಬಂದಿರಲಿಲ್ಲ ಅಂದರೆ ಉಡ್ತಾ ಕರ್ನಾಟಕ ಆಗ್ತಿತ್ತು. ಕೊರೊನಾದಿಂದ ಡ್ರಗ್ಸ್ ಪ್ರಕರಣಗಳು ಕಡಿಮೆಯಾಗಿವೆ ಎಂದು ಹೇಳಿದ್ದಾರೆ.
ಮುಂಬರುವ ದಿನಗಳಲ್ಲಿ ಡ್ರಕ್ಸ್ ಪ್ರಕರಣವನ್ನು ಸಾಕ್ಷಿ ಸಮೇತ ದಾಖಲೆ ರಿಲೀಸ್ ಮಾಡಲಾಗುವುದು. ಅನುಶ್ರೀಗೆ ಬೆಂಗಳೂರಿನ ಮನೆ, ಮಂಗಳೂರಿನ ಮನೆ ಹೇಗೆ ಬಂತು? 12 ಕೋಟಿಯ ಮನೆ ಹೇಗೆ ಬಂತು ಎಂದು ಅವರು ತಿಳಿಸಬೇಕು ಎಂದು ಆಗ್ರಹಿಸಿದ್ದಾರೆ.