ನವದೆಹಲಿ, ಸೆ. 08 (DaijiworldNews/PY): "ಭಾರತೀಯ ವಾಯುಪಡೆಯು ಮುಂದಿನ 2 ದಶಕಗಳಲ್ಲಿ ಸುಮಾರು 350 ವಿಮಾನಗಳನ್ನು ಖರೀದಿ ಮಾಡಲು ಯೋಜಿಸುತ್ತಿದೆ" ಎಂದು ಏರ್ ಚೀಫ್ ಮಾರ್ಷಲ್ ಆರ್.ಕೆ.ಎಸ್ ಭದೌರಿಯಾ ತಿಳಿಸಿದ್ದಾರೆ.
ಭಾರತೀಯ ಏರೋಸ್ಪೇಸ್ ವಲಯದ ಕುರಿತಾದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, "ಚೀನಾದ ಸವಾಲುಗಳನ್ನು ಗಮನದಲ್ಲಿರಿಸಿಕೊಂಡು ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವ ಅವಶ್ಯಕತೆ ಇದೆ" ಎಂದಿದ್ದಾರೆ.
"ಭದ್ರತೆಯ ಕಾರಣದಿಂದ ನಮ್ಮದೇ ಉದ್ಯಮದಿಂದ ನಿರ್ಮಿಸಬೇಕಾದ ಸ್ಥಾಪಿತ ತಂತ್ರಜ್ಞಾನಗಳನ್ನು ಹೊಂದಿರಬೇಕು" ಎಂದು ಹೇಳಿದ್ದಾರೆ.
"ವಿವಿಧ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಭಾರತವು ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬಿಯಾಗುತ್ತಿದೆ. ಹಾಗಾಗಿ ಮುಂದಿನ ಎರಡು ದಶಕಗಳಲ್ಲಿ ದೇಶದೊಳಗಿಂದ ಸುಮಾರು 350 ವಿಮಾನಗಳನ್ನು ಖರೀದಿ ಮಾಡಲು ಐಎಎಫ್ ಯೋಜಿಸುತ್ತಿದೆ" ಎಂದು ತಿಳಿಸಿದ್ದಾರೆ.